ರಜೌರಿ: ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಮಾಂಜಕೋಟ್ ಸೆಕ್ಟರ್ ವಲಯದಲ್ಲಿ ಇಂದು ಪಾಕಿಸ್ತಾನದಿಂದ ಅಪ್ರಚೋದಿತ ಗುಂಡಿನ ದಾಳಿ ನಡೆಸಲಾಗಿದೆ
ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಪಾಕಿಸ್ತಾನ ಸ್ವಯಂ ಚಾಲಿನ ಶಸ್ತ್ರಾಸ್ತ್ರಗಳು, ಸಣ್ಣ ಫಿರಂಗಿ ಬಳಸಿ ದಾಳಿ ನಡೆಸಲಾಗಿದೆ
ಭಾರತೀಯ ಸೇನೆಯಿಂದಲೂ ತಕ್ಕ ಪ್ರತ್ಯುತ್ತರ ನೀಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ನೌಶೇರಾ ವಲಯದಲ್ಲಿ ಮೊನ್ನೆ ದಿನ ಪಾಕಿಸ್ತಾನಿದ ಅಪ್ರಚೋದಿತ ಗುಂಡು ಹಾಗೂ ಶೆಲ್ ದಾಳಿ ನಡೆಸಲಾಗಿತ್ತು
ರಜೌರಿ, ಬಾರಮುಲ್ಲಾ, ಕತುವಾ, ಕುಪ್ವಾರ ಕಣಿವೆಗಳಲ್ಲಿ ಪಾಕಿಸ್ತಾನ ಇತ್ತೀಚಿಗೆ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಸಾವನ್ನಪ್ಪಿ, ಹಲವು ಮಂದಿ ನಾಗರಿಕರು ಗಾಯಗೊಂಡಿದ್ದರು.