ಸಂಸತ್ ಸದಸ್ಯರ ಭತ್ಯೆ ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ 
ದೇಶ

ಸಂಸತ್ ಸದಸ್ಯರ ಭತ್ಯೆ ಹೆಚ್ಚಳಕ್ಕೆ ಸಚಿವ ಸಂಪುಟ ಅನುಮೋದನೆ

ಸಂಸದರ ವೇತನ ಹೆಚ್ಚಳ ಪ್ರಸ್ತಾಪಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ನವದೆಹಲಿ: ಸಂಸದರ ವೇತನ ಹೆಚ್ಚಳ ಪ್ರಸ್ತಾಪಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಇದರಂತೆ ಸಂಸದರ ಕ್ಷೇತ್ರ ಭತ್ಯೆ, ವಸತಿ, ದೂರವಾಣಿ ಭತ್ಯೆ, ಕಛೇರಿ ವೆಚ್ಚಗಳಲ್ಲಿ ಏರಿಕೆ ಆಗಲಿದೆ.
ಸಂಸದರ ಕ್ಷೇತ್ರದ ಭತ್ಯೆಯನ್ನು ಈಗಿರುವ 45 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಳ ಹೆಚ್ಚಳ ಮಾಡಬೇಕು,  ಪೀಠೋಪಕರಣಗಳ ಭತ್ಯೆಯನ್ನು 75 ಸಾವಿರದಿಂದ 1 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಬೇಕೆಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದ್ದಿತು.
ಇದೀಗ ಪ್ರಸ್ತಾವನೆಗಳಿಗೆ ಸಂಪುಟವು ಒಪ್ಪಿಗೆಯ ಮುದ್ರೆಯನ್ನೊತ್ತಿದ್ದು ಇದರ ಅನುಸಾರ ಸಂಸದರೊಬ್ಬರು ಮಾಸಿಕ  50 ಸಾವಿರ ಮೂಲ ವೇತನ, 45 ಸಾವಿರ ಕ್ಷೇತ್ರ ಭತ್ಯೆ, ವಸತಿ, ದೂರವಾಣಿ ಇನ್ನಿತರೆ ಮೂಲಭೂತ ಅಗತ್ಯಗಳ ಭತ್ಯೆ ಸೇರಿತಿಂಗಳಿಗೆ  2.7 ಲಕ್ಷ ರೂ. ಪಡೆಯಲಿದ್ದಾರೆ.
ದೇಶದಲ್ಲಿ ಒಟ್ಟು 775 ಸಂಸದರಿದ್ದು ಇದರಲ್ಲಿ ಲೋಕಸಭೆಯಲ್ಲಿ 536, ರಾಜ್ಯಸಭೆಯಲ್ಲಿ 239 ಸಂಸದರಿರುವರು..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ಕರ್ನಾಟಕದ ಇತಿಹಾಸದಲ್ಲೇ ಮೊದಲು: ಪ್ರತಿಭಟಿಸುವುದಾದರೆ ಸದನದ ಬಾವಿಗೆ ಬನ್ನಿ; ವಿಪಕ್ಷ ಶಾಸಕರಿಗೆ ಸ್ಪೀಕರ್ ಆಹ್ವಾನ, BJP ಕಿಡಿ!

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸೌಧ ಆವರಣದಲ್ಲಿ ಪ್ರತಿಭಟನೆ; ಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ; Video

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!