ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆ ದರ ಮತ್ತೆ ವೃದ್ಧಿಗೊಂಡಿದೆ. ಉತ್ಪಾದನಾ ಮತ್ತು ಸೇವಾ ವಲಯದಲ್ಲಿ ಕೇಂದ್ರಸರ್ಕಾರಕೈಗೊಂಡ ತ್ವರಿತ ಕ್ರಮಗಳಿಂದಾಗಿ ಭಾರತದ ಒಟ್ಟಾರೇ ದೇಶಿಯ ಉತ್ಪನ್ನ ಶೇ.7.2 ರಷ್ಟುಏರಿಕೆಯಾಗಿದೆ.
ಒಂದು ವರ್ಷದ ನಂತರ ಚೀನಾದ ಆರ್ಥಿಕ ಬೆಳವಣಿಗೆ ದರವನ್ನೂ ಮೀರಿಸಿದೆ ಡಿಸೆಂಬರ್ ತ್ರೈಮಾಸಿಕದಲ್ಲಿ ಶೇ.7.2 ರಷ್ಟು ಜಿಡಿಪಿ ಬೆಳವಣಿಗೆಯಾಗಿರುವ ಏಷ್ಯಾದ ಮೂರನೇ ಅತಿದೊಡ್ಡ ರಾಷ್ಟ್ರವಾಗಿದೆ
ಅಂಕಿಅಂಶ ಸಚಿವಾಲಯ ಈ ಮಾಹಿತಿ ಬಿಡುಗಡೆ ಮಾಡಿದ್ದು,ಈ ಅವಧಿಯಲ್ಲಿನ ಚೀನಾದ ಆರ್ಥಿಕ ಬೆಳವಣಿಗೆ ದರ ಶೇ.6.8 ರಷ್ಟಿದೆ. 2016ರ ಕೊನೆಯ ಮೂರು ತಿಂಗಳ ಅವಧಿಯಲ್ಲಿ ಭಾರತದ ಆರ್ಥಿಕತೆ ತ್ವರಿತಗತಿಯಲ್ಲಿ ಬೆಳವಣಿಗೆಯಾಗಿದೆ ಎಂದು ತಿಳಿಸಿದೆ.
ನೋಟ್ ಅಮಾನ್ಯೀಕರಣ, ಜಿ.ಎಸ್. ಟಿ ಜಾರಿ ನಂತರ ಭಾರತ ಪುನರ್ ಶ್ಚೇತನ ಪಡೆದುಕೊಂಡಿದೆ ಎಂದು ಮೂಡಿ ಹೇಳಿದ್ದು ಜಿಎಸ್ ಟಿ ಜುಲೈಯಿಂದ ವ್ಯವಸ್ಥೆ ಅನುಷ್ಠಾನದಿಂದ ಮೂಲಸೌಕರ್ಯ ಹಾಗೂ ಸೇವಾ ವಲಯದಲ್ಲಿ ಗಣನೀಯ ಪ್ರಮಾಣದ ವೃದ್ದಿಯಾಗಿದೆ.
ಮುಂದಿನ ಆರ್ಥಿಕ ವರ್ಷದಲ್ಲಿ ಜಿಎಸ್ ಟಿ ವ್ಯವಸ್ಥೆಯಲ್ಲಿ ಸುಧಾರಣೆಯಾಗಲಿದ್ದು, ಮತ್ತಷ್ಟು ಪ್ರಗತಿಯಾಗಲಿದೆ ಎಂದು ಹರಿಹಂತ್ ಬಂಡವಾಳ ಮಾರುಕಟ್ಟೆಯ ನಿರ್ದೇಶಕ ಅನಿತಾ ಗಾಂಧಿ ಹೇಳುತ್ತಾರೆ.
ಹಣದುಬ್ಬರನ್ನು ಆರ್ ಬಿಐ ಸಮಾತೋಲನ ಪ್ರಮಾಣದಲ್ಲಿ ನಿರ್ವಹಣೆ ಮಾಡಿ ಬೆಳವಣಿಗೆಗೆ ಬೆಂಬಲ ನೀಡಿದೆ. ಮುಂದಿನ ಆರ್ಥಿಕ ನೀತಿ ಸಭೆ ವೇಳೆಯಲ್ಲಿ ಬಡ್ಡಿದರ ಕಡಿಮೆ ಮಾಡುವ ಸಾಧ್ಯತೆ ಇದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ನಂತರ ಪ್ರಧಾನಿ ನರೇಂದ್ರ ಮೋದಿ ತೀವ್ರ ರೀತಿಯ ಟೀಕೆಗಳಿಗೆ ಗುರಿಯಾಗಿದ್ದರು.
ಆದರೆ, ಇದೀಗ ಜಿಡಿಪಿಯಲ್ಲಿ ಆಗಿರುವ ಬೆಳವಣಿಗೆ ನರೇಂದ್ರಮೋದಿಗೆ ನೆರವಾಗಲಿದೆ. ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂಲಸೌಕರ್ಯ ಹಾಗೂ ಕಲ್ಯಾಣ ಯೋಜನೆಗಳಾಗಿ ಸಾಕಷ್ಟು ಅನುದಾನ ನೀಡಿದ್ದಾರೆ. ಇದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹಣಕಾಸು ಕೊರತೆಗೆ ಕಾರಣವಾಗಬಹುದು ಎಂಬಂತಹ ಮಾತುಗಳು ಕೇಳಿಬರುತ್ತಿವೆ.