ಹೈದರಾಬಾದ್: ಮೊದಲ ವರ್ಷದ ಎಂಟೆಕ್ ವಿದ್ಯಾರ್ಥಿಯೊಬ್ಬ ಕೈಯಿಂದ ಜಾರಿದ ಮೊಬೈಲ್ ಅನ್ನು ಹಿಡಿಯಲು ಹೋಗಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಪ್ರಶಾಂತ್ ರೆಡ್ಡಿ ಎಂದು ಗುರುತಿಸಲಾಗಿದೆ. ರಜೆ ಹಿನ್ನೆಲೆ ಪ್ರಶಾಂತ್ ರೆಡ್ಡಿ ವಾರಂಗಲ್ ಜಿಲ್ಲೆಯಲ್ಲಿರುವ ತನ್ನೂರು ಹಾಸನಪರ್ತಿಗೆ ರೈತಿನಲ್ಲಿ ಹೊರಟ್ಟಿದ್ದ ವೇಳೆ ಈ ದುರಂತ ಸಂಭವಿಸಿದೆ.
ಸಿಕಿಂದರಬಾದ್-ಲಾಲಗುಡಾ ಮಾರ್ಗ ಮಧ್ಯೆ ಚಲಿಸುತ್ತಿದ್ದ ಶಾತವಾಹನ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಶಾಂತ್ ರೆಡ್ಡಿ ಪ್ರಯಾಣಿಸುತ್ತಿದ್ದರು. ಈ ವೇಳೆ ರೈಲು ಬೋಗಿಯ ಬಾಗಿಲಿನ ಬಳಿ ನಿಂತು ಮೊಬೈಲ್ ನಲ್ಲಿ ಮಾತನಾಡುತ್ತಿದಾಗ ಮೊಬೈಲ್ ಕೈಯಿಂದ ಜಾರಿದೆ. ಈ ವೇಳೆ ಮೊಬೈಲ್ ಅನ್ನು ಹಿಡಿದುಕೊಳ್ಳಲು ಹೋಗಿ ರೈಲಿನ ಹಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದಬಂದಿದೆ.
ಪ್ರಕರಣ ಸಂಬಂಧ ಸಿಕಿಂದರಬಾದ್ ರೈಲ್ವೆ ಪೊಲೀಸರು ತನಿಖೆ ನಡೆಸುತ್ತದ್ದು ವಿದ್ಯಾರ್ಥಿ ಪ್ರಶಾಂತ್ ರೆಡ್ಡಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.