ದೇಶ

ವಿವಾಹ ವಿಚ್ಛೇದನ ಕೇಳಿದ ಓಮರ್ ಅಬ್ದುಲ್ಲಾ, ಮರು ಮದುವೆಗೆ ಉತ್ಸುಕ: ಹೈ ಕೋರ್ಟ್ ಗೆ ಮಾಹಿತಿ

Srinivas Rao BV
ನವದೆಹಲಿ: ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ವಿವಾಹ ವಿಚ್ಛೇದನ ಕೇಳಿದ್ದು, ಮರು ವಿವಾಹವಾಗಲು ಬಯಸಿದ್ದಾರೆ. ಈ ಕುರಿತು ದೆಹಲಿ ಹೈಕೋರ್ಟ್ ಓಮರ್ ಅಬ್ದುಲ್ಲಾ ಅವರ ಪತ್ನಿ ಪಾಯಲ್ ಅಬ್ದುಲ್ಲಾರಿಂದ ಪ್ರತಿಕ್ರಿಯೆ ಕೇಳಿದೆ. 
ನ್ಯಾ. ಸಿದ್ಧಾರ್ಥ್ ಮೃದುಲ್ ಹಾಗೂ ದೀಪಾ ಶರ್ಮಾ ಅವರಿದ್ದ ವಿಭಾಗೀಯ ಪೀಠ ಪಾಯಲ್ ಅಬ್ದುಲ್ಲಾ ಗೆ ಏ.23 ರೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದೆ. ವಿಚ್ಛೇದನದ ವಿಚಾರವಾಗಿ ತ್ವರಿತ ವಿಚಾರಣೆ ನಡೆಸುವುದಕ್ಕೆ ಓಮರ್ ಅಬ್ದುಲ್ಲಾ ಆಗ್ರಹಿಸಿದ್ದು ಈ ಬಗ್ಗೆ ಪಾಯಲ್ ನಿಲುವನ್ನೂ ಕೋರ್ಟ್ ಕೇಳಿದೆ. 
ಓಮರ್ ಅಬ್ದುಲ್ಲಾ ಪರವಾಗಿ ವಾದ ಮಂಡಿಸಿರುವ ಮಾಳವಿಕಾ ರಾಜ್ಕೋಟಿಯಾ, " ಓಮರ್ ಅಬ್ದುಲ್ಲಾ ಹಾಗೂ ಪಾಯಲ್ ಅಬ್ದುಲ್ಲಾ ಮರು ಮದುವೆಯಾಗಲು ಇಚ್ಛಿಸುತ್ತಿದ್ದಾರಾ? ಎಂದು ಕೋರ್ಟ್ ಕೇಳಿತ್ತು, ಈ ಪ್ರಶ್ನೆಗೆ ಪಾಯಲ್ ಅಬ್ದುಲ್ಲಾ ಸಕಾರಾತ್ಮಕವಾಗಿ ಸ್ಪಂಧಿಸಿದ್ದರು. ಈ ಹಿಂದೆ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಓಮರ್ ಅಬ್ದುಲ್ಲಾ ತಮ್ಮ ವೈವಾಹಿಕ ಜೀವನ ಸರಿಪಡಿಸಲಾಗದ ಮಟ್ಟಿಗೆ ಮುರಿದಿದೆ ಎಂದು ಹೇಳಿದ್ದರು. ಆದರೆ ಅದನ್ನು ಕೋರ್ಟ್ ನಲ್ಲಿ ಸಾಬೀತುಪಡಿಸಲು ವಿಫಲರಾಗಿದ್ದರು.  1994 ರಲ್ಲಿ ವಿವಾಹವಾಗಿದ್ದ ಓಮರ್ ಅಬ್ದುಲ್ಲಾ ಪಾಯಲ್ ಅಬ್ದುಲ್ಲಾ ವಿವಾಹವಾಗಿದ್ದರು ಆದರೆ 2007 ರಿಂದ ತಮ್ಮ ವೈವಾಹಿಕ ಜೀವನ ಮುರಿದುಬಿದ್ದಿದೆ ಎಂದು ಅಬ್ದುಲ್ಲಾ ಕೋರ್ಟ್ ಗೆ ಹೇಳಿದ್ದರು. ಇದಕ್ಕೆ ಪೂರಕವೆಂಬಂತೆ 2009 ರಿಂದಲೂ ಇಬ್ಬರೂ ಪ್ರತ್ಯೇಕವಾಗಿ ವಾಸವಿದ್ದಾರೆ. 
SCROLL FOR NEXT