ಮುಂಬೈನಲ್ಲಿ ಮತ್ತೆ ಅಗ್ನಿ ದುರಂತ, ನಾಲ್ವರ ಸಾವು 7 ಜನರಿಗೆ ಗಾಯ
ಮುಂಬೈ: ಮುಂಬೈನ ಕಮಲಾ ಮಿಲ್ಸ್ ಅಗ್ನಿ ದುರಂತವನ್ನು ಮರೆಯುವ ಮುನ್ನವೇ ಮುಂಬೈನಲ್ಲಿ ಇನ್ನೊಂದು ಅಗ್ನಿ ಅವಘಡ ಸಂಭವಿಸಿದೆ.
ಮುಂಬೈನ ಅಂಧೇರಿಯಲ್ಲಿನ ಮೈಮೂನ್ ಮಂಜಿಲ್ ಎಂಬ ಕಟ್ಟಡದಲ್ಲಿ ಈ ದುರಂತ ಸಂಭವಿಸಿದ್ದು 4 ಜನ ಸಾವನ್ನಪ್ಪಿದ್ದು ಏಳು ಮಂದಿಗೆ ಗಾಯವಾಗಿದೆ.
ಇಂದು ಬೆಳಗಿನ ಜಾವ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಇದಕ್ಕೆ ಕಾರಣಗಳು ಪತ್ತೆಯಾಗಿಲ್ಲ. ಘಟನೆಯಲ್ಲಿ ಮೃತಪಟ್ಟವರಲ್ಲಿ 10 ಹಾಗೂ 14 ವರ್ಷದ ಮಕ್ಕಳು ಹಾಗೂ ಓರ್ವ ಹಿರಿಯ ನಾಗರಿಕರು ಸೇರಿದ್ದಾರೆ ಎನ್ನಲಾಗಿದೆ.
ಸದ್ಯ ಸ್ಥಳಕ್ಕೆ ಆಗಮಿಸಿರುವ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದಾರೆ. ಕಳೆದ ವಾರವಷ್ಟೇ ಮುಂಬೈನ ಕಮಲಾ ಮಿಲ್ಸ್ ಅಗ್ನಿ ದುರಂತದಲ್ಲಿ 14 ಜನ ದಾರುಣವಾಗಿ ಸಾವನ್ನಪ್ಪಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos