ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ಆಧ್ಯಾತ್ಮಕ್ಕೆ ಅವಕಾಶವಿಲ್ಲ ಎಂದು ಡಿಎಂಕೆ ನಾಯಕ ಸ್ಟ್ಯಾಲಿನ್ ಇತ್ತೀಚೆಗಷ್ಟೇ ರಾಜಕಾರಣಕ್ಕೆ ಪ್ರವೇಶಿಸಿರುವ ರಜಿನಿಕಾಂತ್ ಗೆ ಟಾಂಗ್ ನೀಡಿದ್ದಾರೆ.
ರಜನಿಕಾಂತ್ ಡಿಎಂಕೆ ನಾಯಕ ಕರುಣಾನಿಧಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಸ್ಟ್ಯಾಲಿನ್ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ತಮಿಳುನಾಡು ದ್ರಾವಿಡ ಚಳುವಳಿಯ ನಾಡು, ಇಲ್ಲಿ ಆಧ್ಯಾತ್ಮಕ್ಕೆ ಅವಕಾಶವಿಲ್ಲ ಎಂದು ಸ್ಟ್ಯಾಲಿನ್ ಹೇಳಿದ್ದಾರೆ.
ತಮಿಳುನಾಡು ದ್ರಾವಿಡ ಚಳುವಳಿಯ, ಪೆರಿಯಾರ್ ನ ಭೂಮಿ, ಇಲ್ಲಿನ ರಾಜಕಾರಣದಲ್ಲಿ ಆಧ್ಯಾತ್ಮ ಕೆಲಸ ಮಾಡುವುದಿಲ್ಲ ಎಂದು ಸ್ಟ್ಯಾಲಿನ್ ಅಭಿಪ್ರಾಯಪಟಿದ್ದಾರೆ. ಕರುಣಾನಿಧಿ ಭೇಟಿ ವೇಳೆ ರಜಿನಿಕಾಂತ್ ಡಿಎಂಕೆ ಬೆಂಬಲ ಕೇಳಿದರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸ್ಟ್ಯಾಲಿನ್ ಅವೆಲ್ಲಾ ಚುನಾವಣೆಯ ಸಂದರ್ಭದಲ್ಲಿ ನಿರ್ಧಾರವಾಗುವ ವಿಷಯಗಳಷ್ಟೇ ಎಂದಿದ್ದಾರೆ.