ದೇಶ

ಎಲ್ಲಾ ಭಾಷೆಗಳ ಬಗ್ಗೆ ನನಗೆ ಹೆಮ್ಮೆ ಇದೆ: ಕನ್ನಡದಲ್ಲಿ ಮಾತನಾಡಿದ್ದ ವೀಡಿಯೋ ಹಂಚಿಕೊಂಡ ಸ್ವರಾಜ್

Raghavendra Adiga
ನವದೆಹಲಿ: "ನಾನು ಎಲ್ಲಾ ಭಾರತೀಯ ಭಾಷೆಗಳ ಬಗ್ಗೆ ಹೆಮ್ಮೆಪಡುತ್ತೇನೆ. ನಾನು ಅವರಲ್ಲಿ ಕೆಲವನ್ನು ಸರಾಗವಾಗಿ ಮಾತನಾಡುತ್ತೇನೆ." 
ಹಿಂದಿ ಹೊರತಾದ ಇತರೆ ಭಾರತೀಯ ಭಾಷೆಗಳ ಬಗೆಗೆ ನನಗೆ ಅಪಾರ ಗೌರವವಿದೆ. ಅವುಗಳಲ್ಲಿ ನಾನು ಕೆಲವನ್ನು ಸರಾಗವಾಗಿ ಬಳಸಬಲ್ಲೆ ಎಂದು ಭಾರತ ವಿದೇಶಾಂಗ ಸಚಿವೆ ಸುಷಂಆ ಸ್ವರಾಜ್ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯಾಗಿ ಘೊಷಿಸುವ ವಿಚಾರದಲ್ಲಿ ಲೋಕಸಭೆಯಲ್ಲಿ ಸುಷ್ಮಾ ಸ್ವರಾಜ್ ಹಾಗು ಶಶಿ ತರೂರ್ ನಡುವೆ ನಡೆದಿದ್ದ ವಾಗ್ವಾದಕ್ಕೆ ಸುಷ್ಮಾ ಅಈ ಸಮರ್ಥನೆ ನೀಡಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಹಿಂದಿಯನ್ನು ಅಧಿಕೃತ ಭಾಷೆಯನ್ನಾಗಿ ಮಾಡುವ ಅಗತ್ಯವಿದೆಯೆ ಎಂದು ತರೂರ್ ಪ್ರಶ್ನಿಸಿದ್ದು ಅದಕ್ಕೆ ಸಚಿವರು ಲೋಕಸಭೆಯಲ್ಲಿ ಉತ್ತರಿಸಿದ್ದರು. 
"ವಿಶ್ವ ಸಂಸ್ಥೆಯಲ್ಲಿ ಹಿಂದಿ ಏಕೆ ಅಧಿಕೃತ ಭಾಷೆಯಾಗಿಲ್ಲ ಎನ್ನುವುದು ಹಲವರ ಪ್ರಶ್ನೆ. ಅದಕ್ಕಾಗಿ ಕೆಲವು ಪ್ರಕ್ರಿಯೆಗಳಿವೆ. ಹಿಂದಿ ಅಧಿಕೃತ ಭಾಷೆಯಾಗಬೇಕಾದರೆ 193 ಸದಸ್ಯ ರಾಷ್ಟ್ರಗಳಲ್ಲಿ 129 ರಾಷ್ಟ್ರಗಳು ಅದರ ಪರವಾಗಿ ಮತ ಹಾಕಬೇಕಿದೆ. ಈ ಮತದಾನಕ್ಕೆ ತಗಲುವ ವೆಚ್ಚವನ್ನು ಅವು ಭರಿಸಬೇಕು. ಆರ್ಥಿಕ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ಇದರಿಂದ ಹೊರೆಯಾಗಲಿದೆ" ಸುಷ್ಮಾ ಸ್ವರಾಜ್ ವಿವರಣೆ ನಿಡಿದ್ದರು. 
ಆ ಸಮಯ ತರೂರ್ ಅವರು ನಮ್ಮ ರಾಷ್ಟ್ರಭಾಷೆಯೂ ಅಲ್ಲದ ಹಿಂದಿಯನ್ನು ವಿಶ್ವಸಂಸ್ಥೆಯಲ್ಲಿ ಅಧಿಕೃತಗೊಳಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದರು. ಇದೇ ಸಮಯದಲ್ಲಿ ಅವರು ತಮಿಳುನಾಡು ಇಲ್ಲವೆ ಬಂಗಾಳದವರು ಪ್ರಧಾನಿಗಳಾಗಿ ವಿಶ್ವಸಂಸ್ಥೆಗೆ ತೆರಳಿದಾಗ ಏನು ಮಾಡಬೇಕು ಎಂದೂ ಕೇಳಿದ್ದರು.
ಇದಕ್ಕೆ ಪ್ರತಿಯಾಗಿ ಸುಷ್ಮಾ ಸ್ವರಾಜ್ ತಮ್ಮ ಟ್ವಿಟ್ಟರ್ ಕಾತೆಯಲ್ಲಿ ಟ್ವೀಟ್ ಮಾಡಿದ್ದು "ನನಗೆ ಎಲ್ಲಾ ಭಾರತೀಯ ಭಾಷೆಗಳ ಬಗೆಗೆ ಹೆಮ್ಮೆ ಇದೆ. ನಾನು ಅವುಗಳಲ್ಲಿ ಕೆಲ ಬಾಷೆಗಳಲ್ಲಿ ಸರಾಗವಾಗಿ ಮಾತನಾಡಬಲ್ಲೆ" ಎಂದಿದ್ದು ಇದಕ್ಕೆ ಸಮರ್ಥನೆಯಾಗಿ ತಾವು 1999ರಲ್ಲಿ ಬಳ್ಳಾರಿಗೆ ಆಗಮಿಸಿದ್ದಾಗ ಕನ್ನಡದಲ್ಲಿ ಮಾತನಾಡಿದ್ದ ವೀಡಿಯೋ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
SCROLL FOR NEXT