ದೇಶ

ರೂ.500 ಕ್ಕೆ ಆಧಾರ್ ಮಾಹಿತಿ ಮಾರಾಟ: ಮಾಧ್ಯಮ ವರದಿಯನ್ನು ತಿರಸ್ಕರಿಸಿದ ಯುಐಡಿಎಐ

Srinivas Rao BV
ನವದೆಹಲಿ: 500 ರೂಪಾಯಿ ನೀಡಿದರೆ 10 ನಿಮಿಷಗಳಲ್ಲಿ ಒಂದು ಬಿಲಿಯನ್ ಆಧಾರ್ ಕಾರ್ಡ್ ಗಳ ಮಾಹಿತಿಯನ್ನು ಪಡೆಯಬಹುದು ಎಂಬ ಮಾಧ್ಯಮಗಳ ವರದಿಯನ್ನು ವಿಶಿಷ್ಟ ಗುರುತಿನ ಪ್ರಾಧಿಕಾರ ತಳ್ಳಿಹಾಕಿದೆ. 
ವರದಿಯನ್ನು ತಪ್ಪು ಎಂದು ಹೇಳಿರುವ ಯುಐಡಿಎಐ, ಆಧಾರ್ ಡಾಟಾ ದುರ್ಬಳಕೆಯಾಗಿಲ್ಲ ಎಂದು ಯುಐಡಿಎಐ ಸ್ಪಷ್ಟನೆ ನೀಡಿದ್ದು, ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವುದಕ್ಕೆ ರಾಜ್ಯ ಅಥವಾ ನಿಗದಿಪಡಿಸಿರುವ ಸಿಬ್ಬಂದಿಗಳಿಗೆ ಮಾತ್ರ ಸರ್ಚ್ ಸೌಲಭ್ಯಗಳನ್ನು ನೀಡಲಾಗಿದೆ. ಆದರೆ ಆಧಾರ್ ಕಾರ್ಡ್ ಗಳ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ, ಈ ಘಟನೆ ಬಹುಶಃ ಸರ್ಚ್ ಸೌಲಭ್ಯವನ್ನು ದುರ್ಬಳಕೆ ಮಾಡಿಕೊಂಡಿರುವ ಪ್ರಕರಣ ಇರಬಹುದು ಎಂದು ಯುಐಡಿಎಐ ಹೇಳಿದೆ. 
ಯುಐಡಿಎಐ ಬಳಿ ಲಾಗ್ ಇನ್ ಆಗಿರುವ ವಿವರಗಳು ಲಭ್ಯ ಇರುವುದರಿಂದ ಯಾವ ವ್ಯಕ್ತಿ ಡಾಟಾ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂಬನ್ನು ಪರಿಶೀಲಿಸಿ ಆತನ ವಿರುದ್ಧ ದೂರು ದಾಖಲಿಸಲಾಗುತ್ತಿದೆ ಎಂದು ಹೇಳಿದೆ. 
SCROLL FOR NEXT