ನವದೆಹಲಿ: ರಾಜ್ಯಸಭೆ ಚುನಾವಣೆಗೆ ಎಎಪಿ ಅಭ್ಯರ್ಥಿ ಎನ್ ಡಿ ಗುಪ್ತಾ ಅವರು ಸಲ್ಲಿಸರುವ ನಾಮಪತ್ರವನ್ನು ತಿರಸ್ಕರಿಸುವಂತೆ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅಜೆಯ್ ಮಾಕೇನ್ ಅವರು ಶನಿವಾರ ಚುನಾವಣಾ ಅಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.
ಗುಪ್ತಾ ಅವರು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ ಟ್ರಸ್ಟ್ ಸದಸ್ಯರಾಗಿದ್ದು, ಲಾಭದಾಯಕ ಹುದ್ದೆ ಹೊಂದಿದ್ದಾರೆ. ಹೀಗಾಗಿ ಅವರ ನಾಮಪತ್ರವನ್ನು ತಿರಸ್ಕರಿಸುವಂತೆ ಮಾಕೇನ್ ಅವರು ಒತ್ತಾಯಿಸಿದ್ದಾರೆ.
1951ರ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 36ರಡಿ ಎನ್ ಗುಪ್ತಾ ಅವರ ನಾಮಪತ್ರವನ್ನು ತಿರಸ್ಕರಿಸಬಹುದಾಗಿದೆ ಎಂದು ಅಜಯ್ ಮಾಕೇನ್ ಅವರು ಹೇಳಿದ್ದಾರೆ.
ದೆಹಲಿ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುತ್ತಿರುವ ಮೂರು ಸ್ಥಾನಗಳಿಗೆ ಆಮ್ ಆದ್ಮಿ ಪಕ್ಷದಿಂದ ಎನ್ ಡಿ ಗುಪ್ತಾ, ಸಂಜಯ್ ಸಿಂಗ್ ಹಾಗೂ ಸುಶಿಲ್ ಗುಪ್ತಾ ಅವರು ಜನವರಿ 4ರಂದು ನಾಮಪತ್ರ ಸಲ್ಲಿಸಿದ್ದರು.