ದೇಶ

ಜಿಡಿಪಿ ಎಂದರೆ 'ಗ್ರಾಸ್ ಡಿವೈಸಿವ್ ಪಾಲಿಟಿಕ್ಸ್': ಪ್ರಧಾನಿ ಮೋದಿ, ಜೇಟ್ಲಿ ವಿರುದ್ಧ ರಾಹುಲ್ ವಾಗ್ದಾಳಿ

Manjula VN
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಜಿಡಿಪಿ ಎಂದರೆ 'ಗ್ರಾಸ್ ಡಿವೈಸಿವ್ ಪಾಲಿಟಿಕ್ಸ್' ಎಂದು ಶನಿವಾರ ಟೀಕಿಸಿದ್ದಾರೆ. 
ನಿನ್ನೆಯಷ್ಟೇ ಅಂಕಿ ಅಂಶ ಮತ್ತು ಕಾರ್ಯಕ್ರಮ ನಿರ್ವಹಣಾ ಸಚಿವಾಲಯ 2017-18ನೇ ಸಾಲಿನ ಜಿಡಿಪಿ ಬೆಳವಣಿಗೆ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಂತೆ ಭಾರತದ ಜಿಡಿಪಿ ಬೆಳವಣಿಗೆ ಈ ಪ್ರಸಕ್ತ ಹಣಕಾಸು ವರ್ಷದಲ್ಲಿ 4 ವರ್ಷಗಳಲ್ಲೇ ಕನಿಷ್ಟ ಪ್ರಮಾಣವಾದ ಶೇ.6.5ರಷ್ಟಿರಲಿದೆ ಎಂದು ತಿಳಿಸಲಾಗಿದೆ. 
ಈ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಜೇಟ್ಲಿಯವರ ವಿರುದ್ಧ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ರಾಹುಲ್ ಗಾಂಧಿಯವರು ವಾಗ್ದಾಳಿ ನಡೆಸಿದ್ದಾರೆ.
SCROLL FOR NEXT