ಸಿಂಗಪೂರ್: ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವದಿಂದ ವಿಶ್ವಸಮುದಾಯದಲ್ಲಿ ಭಾರತದ ಪ್ರಾಬಲ್ಯ ಹೆಚ್ಚುತ್ತಿದೆ ಎಂದು ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ನರೇಂದ್ರ ಮೋದಿ ಅವರು ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಉಭಯ ರಾಷ್ಟ್ರಗಳ ನಡುವೆ ಸ್ನೇಹ ಸಂಬಂಧ ವೃದ್ಧಿ ಮಾಡುವುದರ ಜೊತೆಗೆ ವೈಯಕ್ತಿಕ ಸ್ನೇಹವನ್ನೂ ವೃದ್ಧಿಗೊಳಿಸಿಕೊಳ್ಳುತ್ತಾರೆ ಎಂದು ಸಿಂಗಪೂರ್ ನಲ್ಲಿ ಆಸಿಯಾನ್ ರಾಷ್ಟ್ರಗಳ-ಪ್ರವಾಸಿ ಭಾರತೀಯ ದಿವಸ್ ನ್ನುದ್ದೇಶಿಸಿ ಮಾತನಾಡಿರುವ ಸುಷ್ಮಾ ಸ್ವರಾಜ್ ಹೇಳಿದ್ದಾರೆ.
ನಾನು ಯಾವುದೇ ದೇಶಕ್ಕೆ ಭೇಟಿ ನೀಡಿದರೂ ಸಹ ಅಲ್ಲಿ ಭಾರತೀಯರು ಶ್ರಮ ಜೀವಿಗಳು, ಉತ್ತಮ ವ್ಯಕ್ತಿತ್ವದವರು ಹಾಗೂ ಕಾನೂನು ಪಾಲನೆ ಮಾಡುವವರು ಎಂಬ ಅಭಿಪ್ರಾಯವ್ಯಕ್ತವಾಗುವುದು ನನಗೆ ಹೆಮ್ಮೆಯ ಸಂಗತಿ ಎಂದು ಸುಷ್ಮಾ ಸ್ವರಾಜ್ ಭಾರತೀಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.