ದೇಶ

ಕಾಶ್ಮೀರ: ಹಿಜ್ಬುಲ್ ಉಗ್ರ ಸಂಘಟನೆ ಸೇರಿದ ಪಿಎಚ್ ಡಿ ವಿದ್ಯಾರ್ಥಿ, ಪೊಲೀಸರಿಂದ ತನಿಖೆ

Lingaraj Badiger
ಶ್ರೀನಗರ: ಅಲಿಗಢ ಮುಸ್ಲಿಂ ವಿಶ್ವ ವಿದ್ಯಾಲಯ(ಎಎಂಯು)ದ ಪಿಎಚ್ ಡಿ ವಿದ್ಯಾರ್ಥಿಯೊಬ್ಬ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಸೇರಿರುವ ಕುರಿತು ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 
ಕಣಿವೆ ರಾಜ್ಯದ ಸಂಶೋಧನಾ ವಿದ್ಯಾರ್ಥಿ ಎಕೆ-47 ಗನ್ ಹಿಡಿದಿರುವ ಚಿತ್ರ ಸಾಮಾಜಿಕ ತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಮಧ್ಯೆ, ಸಂಶೋಧನಾ ವಿದ್ಯಾರ್ಥಿ ತನ್ನ ಉಗ್ರ ಸಂಘಟನೆ ಸೇರಿರುವುದಾಗಿ ಹಿಜ್ಬುಲ್ ಮುಜಾಹಿದ್ದೀನ್ ಖಚಿತಪಡಿಸಿದೆ.
ಎಎಂಯು ಪಿಎಚ್ ಡಿ ವಿದ್ಯಾರ್ಥಿ ಉಗ್ರ ಸಂಘಟನೆ ಸೇರಿದ್ದಾರೋ ಅಥವಾ ಇಲ್ಲ ಎಂಬುದರ ಬಗ್ಗೆ ನಾವು ತನಿಖೆ ನಡೆಸುತ್ತಿವೆ ಎಂದು ಕುಪ್ವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಮಶೇರ್ ಹುಸೇನ್ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಕುಪ್ವಾರ ಜಿಲ್ಲೆಯ ಪಿಎಚ್ ಡಿ ವಿದ್ಯಾರ್ಥಿ ಮನನ್ ಬಶೀರ್ ವನಿ ಉಗ್ರ ಸಂಘಟನೆ ಸೇರಿರುವುದರ ಬಗ್ಗೆ ಇನ್ನೂ ಖಚಿತ ಮಾಹಿತಿ ಇಲ್ಲ ಎಂದು ಅವರು ಹೇಳಿದ್ದಾರೆ.
SCROLL FOR NEXT