ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ 
ದೇಶ

ಸಂಶೋಧನಾ ವಿದ್ಯಾರ್ಥಿ ಹಿಜ್ಬುಲ್'ಗೆ ಸೇರ್ಪಡೆ ಶಂಕೆ: ಅಲಿಗಢ ಮುಸ್ಲಿಂ ವಿವಿ ಮೇಲೆ ಪೊಲೀಸರ ದಾಳಿ

ಸಂಶೋಧನಾ ವಿದ್ಯಾರ್ಥಿಯೋರ್ವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮೇಲೆ ಉತ್ತರಪ್ರದೇಶ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ...

ಅಲಿಗಢ: ಸಂಶೋಧನಾ ವಿದ್ಯಾರ್ಥಿಯೋರ್ವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಮೇಲೆ ಉತ್ತರಪ್ರದೇಶ ಪೊಲೀಸರು ಸೋಮವಾರ ದಾಳಿ ನಡೆಸಿದ್ದಾರೆ. 
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಜಮ್ಮು ಮತ್ತು ಕಾಶ್ಮೀರ ಮೂಲಕ ಮನ್ನನ್ ವಾನಿ ಎಂಬಾತನ ಫೋಟೋವೊಂದು ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದ್ದರು. ಫೋಟೋದಲ್ಲಿ ಮನ್ನನ್ ವಾನಿ ಕೈಯಲ್ಲಿ ಎಕೆ.47 ಹಿಡಿದುಕೊಂಡಿದ್ದು, ಈತ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆಂಬ ಮಾತುಗಳು ಕೇಳಿಬಂದಿದ್ದವು. 
ಬಶೀರ್ ಅಹ್ಮದ್ ವಾನಿಯವರ ಪುತ್ರ ಮನ್ನನ್ ವಾನಿ ಜನವರಿ 5 ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೆಂಬ ಸಂದೇಶವೊಂದು ಫೋಟೋ ಜೊತೆಗೆ ವಾಟ್ಸ್ ಅಪ್ ಹಾಗೂ ಫೇಸ್ ಬುಕ್ ನಲ್ಲಿ ಹರಿದಾಡಲು ಆರಂಭಿಸಿದ್ದವು. ಇದಕ್ಕೆ ಇಂಬು ನೀಡುವಂತೆಯೇ ವಾನಿ ಕೂಡ ಕೆಲ ದಿನಗಳಿಂದ ಕಣ್ಮರೆಯಾಗಿದ್ದಾನೆ. ಈ ಹಿನ್ನಲೆಯಲ್ಲಿ ಉತ್ತರಪ್ರದೇಶ ಪೊಲೀಸರು ವಿವಿ ಮೇಲೆ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಕುಪ್ವಾರ ಪೊಲೀಸರು, ಮನ್ನನ್ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೋ ಅಥವಾ ಇಲ್ಲವೋ ಎಂಬುದು ಈ ವರೆಗೂ ಖಚಿಸವಾಗಿಲ್ಲ. ಕೆಲ ದುಷ್ಕರ್ಮಿಗಳು ಮನ್ನನ್ ಫೋಟೋವನ್ನು ತಿರುಚಿರಬಹುದು. ಪ್ರಸ್ತುತ ಮನ್ನನ್ ಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 
ಮನ್ನನ್ ಸಹೋದರ ಪ್ರತಿಕ್ರಿಯೆ ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟವನ್ನು ನಾವೂ ಕೂಡ ನೋಡಿದ್ದೇವೆ. ಆದರೆ, ಆತ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದಾನೋ ಅಥವಾ ಇಲ್ಲವೋ ಎಂಬುದು ನಮಗೂ ಗೊತ್ತಿಲ್ಲ. ಜ.4 ರಂದು ಸಹೋದರನೊಂದಿಗಿನ ಸಂಪರ್ಕ ಕಡಿತಗೊಂಡಿತ್ತು. ಬಳಿಕ ಆತನ ಫೋನ್ ಸ್ಟಿಚ್ ಆಫ್ ಬರುತ್ತಿತ್ತು. ಕಾರಣಾಂತರಗಳಿಂದ ಸ್ಟಿಚ್ ಆಫ್ ಆಗಿರಬಹುದು ಎಂದು ತಿಳಿದಿದ್ದೆವು. ಈಗಲೂ ಆತ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಪ್ರಸ್ತುತ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದೇವೆಂದು ತಿಳಿಸಿದ್ದಾರೆ. 
ಕೆಲ ವರದಿಗಳ ಪ್ರಕಾರ, ಕುಪ್ವಾರದಲ್ಲಿರುವ ತಮ್ಮ ಮನೆಗೆ ಹೋಗುವ ಸಲುವಾಗಿ ಮನ್ನನ್ ಜ.3 ರಂದು ವಿಶ್ವವಿದ್ಯಾಲಯದಿಂದ ಹೊರಟಿದ್ದು, ಆ ಬಳಿಕ ಕಣ್ಮರೆಯಾಗಿದ್ದಾನೆಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

60 ದಿನಗಳ ಕದನ ವಿರಾಮ ವಿಸ್ತರಣೆಗೆ ಅಮೆರಿಕ, ಇರಾನ್ ಸಂಧಾನಕಾರರು ಒಪ್ಪಿಗೆ; ಟ್ರಂಪ್ ಅನುಮೋದನೆ ಬಾಕಿ

ಕರ್ನಾಟಕ ನಾಯಕತ್ವ ಬದಲಾವಣೆಯ ನಡುವೆ CM ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

ಕ್ರೇಜಿಸ್ಟಾರ್ ರವಿಚಂದ್ರನ್ ವಿರುದ್ಧವೇ ಅತ್ಯಾಚಾರ ಯತ್ನ ಆರೋಪ, ಮಾನನಷ್ಟ ಮೊಕದ್ದಮೆ: ಕಣ್ಣೀರಿಟ್ಟು ಕ್ಷಮೆ ಕೇಳಿದ 'ಹಳ್ಳಿಮೇಷ್ಟ್ರು' ನಟಿ Bindiya!

Karnataka CM News LIVE Updates | ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ದೆಹಲಿಗೆ ಪ್ರಯಾಣ; ಸಿಎಲ್‌ಪಿ ಸಭೆ ಶನಿವಾರ ಸಾಧ್ಯತೆ!

SCROLL FOR NEXT