ದೇಶ

ದೇಶೀಯ ರಕ್ಷಣಾ ಸಾಮರ್ಥ್ಯ ವೃದ್ಧಿಸಿಕೊಳ್ಳಬೇಕು: ಸೇನಾ ಮುಖ್ಯಸ್ಥ ಬಿಪಿನ್ ರಾವತ್

Srinivasamurthy VN
ನವದೆಹಲಿ: ದೇಶೀಯ ರಕ್ಷಣಾ ವ್ಯವಸ್ಥೆ ಬಲಗೊಳ್ಳಬೇಕು ಎಂದು ಒತ್ತಿ ಹೇಳಿರುವ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ನಾವು ಮೊದಲು ದೇಶೀಯ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಸೇನಾ ತಂತ್ರಜ್ಞಾನ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಬಿಪಿನ್ ರಾವತ್ ಅವರು, ಶುತ್ರು ರಾಷ್ಟ್ರಗಳೊಂದಿಗಿನ ಸಮರ್ಥ್ಯ ಸೆಣಸಾಟಕ್ಕಾಗಿ ಮೊದಲು ನಾವು ನಮ್ಮ ದೇಶೀಯ ರಕ್ಷಣಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಅಂತೆಯೇ ಸ್ವದೇಶಿ ರಕ್ಷಣಾ ವ್ಯವಸ್ಥೆಯನ್ನು ಬಲಿಷ್ಠಗೊಳಿಸಲೇಬೇಕು ಎಂದು ಪ್ರತಿಪಾದಿಸಿರುವ ಬಿಪಿನ್ ರಾವತ್ ಅವರು, ದೇಶದ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸಬೇಕಿದ್ದು, ಇದಕ್ಕಾಗಿ ಶಸ್ತ್ರಾಸ್ತ್ರಗಳ ಆಮದು ಪ್ರಮಾಣ ಕಡಿತವಾಗಿ ದೇಶೀಯ ನಿರ್ಮಾಣ ಪ್ರಮಾಣ ದ್ವಿಗುಣಗೊಳ್ಳಬೇಕು ಎಂದು ಹೇಳಿದರು.
'ದೇಶೀಯ ರಕ್ಷಣಾ ಪರಿಕರಗಳ ನಿರ್ಮಾಣ ಸಾಮರ್ಥ್ಯ ಹೆಚ್ಚಾದರೆ ಮಾತ್ರ ಆಂತರಿಕ ಮತ್ತು ಬಾಹ್ಯ ಶತ್ರುಗಳನ್ನು ಎದುರಿಸಬಹುದು. ಭಾರತದಂತದ ರಾಷ್ಟ್ರ ಶಸ್ತ್ರಾಸ್ತ್ರಗಳಿಗಾಗಿ ಇತರೆ ರಾಷ್ಟ್ರಗಳ ಮೇಲೆ ಅವಲಂಬನೆಯಾಗಬಾರದು.  ದೇಶೀಯ ಶಸ್ತ್ರಾಸ್ತ್ರ ಉದ್ಯಮ ಮತ್ತಷ್ಟು ಅಧುನಿಕವಾಗ ಬೇಕಿದ್ದು, ಇದಕ್ಕಾಗಿ ಹೂಡಿಕೆದಾರರು ಮತ್ತು ಉದ್ಯಮಿಗಳು ಸ್ವಪ್ರೇರಿತರಾಗಿ ಶಸ್ತ್ರಾಸ್ತ್ರ ನಿರ್ಮಾಣ ವಿಭಾಗದಲ್ಲಿ ಹೂಡಿಕೆ ಮಾಡಬೇಕು ಎಂದು ಹೇಳಿದರು. ಅಂತೆಯೇ ಉದ್ಯಮ  ಮತ್ತು ಉದ್ಯಮಿಗಳ ಬೆಂಬಲ ದೊರೆತಿದ್ದೇ ಆದರೆ, ನಮಗೆ ದೊರೆಯುವ ತಂತ್ರಜ್ಞಾನ ಬಳಕೆಯನ್ನು ನಾವು ಸಮರ್ಥವಾಗಿ ಬಳಸಿಕೊಳ್ಳುತ್ತೇವೆ ಎಂದು ಹೇಳಿದರು.
ಅಂತೆಯೇ ಸೇನೆಯನ್ನೂ ಅತ್ಯಾಧುನಿಕಗೊಳಿಸುವ ಅನಿವಾರ್ಯತೆ ಇದ್ದು, ಸೇನೆಯ ಪ್ರತಿಯೊಂದು ವಿಭಾಗಕ್ಕೂ ತಂತ್ರಜ್ಞಾನವನ್ನು ಅಳವಡಿಸಬೇಕಿದೆ. ಭವಿಷ್ಯದಲ್ಲಿ ಭಾರತ ಮತ್ತಷ್ಟು ಕಠಿಣ ಸವಾಲುಗಳನ್ನು  ಎದುರಿಸಬೇಕಾಗಬಹುದು. ಇದಕ್ಕಾಗಿ ನಾವು ಸಿದ್ಧರಿರಬೇಕಾಗುತ್ತದೆ ಎಂದು ಬಿಪಿನ್ ರಾವತ್ ಹೇಳಿದರು.
SCROLL FOR NEXT