ಲಖನೌ: ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪದಡಿ ಗೋರಕ್ಷಕರು ಇಬ್ಬರು ವ್ಯಕ್ತಿಗಳನ್ನು ಹಿಡಿದು ಥಳಿಸಿ ತಲೆಬೋಳಿಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಜ.8 ರಂದು ಈ ಘಟನೆ ನಡೆದಿದ್ದು, ಥಳಿಸುತ್ತಿರುವ ಘಟನೆಯ ವಿಡಿಯೋ ಸಹ ಬಹಿರಂಗವಾಗಿದೆ. ಥಳಿತಕ್ಕೊಳಗಾದ ವ್ಯಕ್ತಿಗಳಿಗೆ ದನ ಕಳ್ಳರು ಎಂದು ಬರೆದಿದ್ದ ಫಲಕ ಹಾಕಲಾಗಿತ್ತು. ಕದ್ದ ದನಗಳ ಸಮೇತ ಗ್ರಾಮಸ್ಥರು ಕಳ್ಳರನ್ನು ಹಿಡಿದಿದ್ದು, ಈ ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.