ದೇಶ

ಚೀನಾ ಬಗ್ಗೆ ಜಾಗರೂಕರಾಗಿರಿ: ಭಾರತಕ್ಕೆ ಟಿಬೆಟ್ ಸರ್ಕಾರದ ಪ್ರಧಾನಿ ಎಚ್ಚರಿಕೆ

Srinivas Rao BV
ಧರ್ಮಶಾಲಾ: ಗಡಿಪಾರಿನಲ್ಲಿರುವ ಟಿಬೆಟ್ ಸರ್ಕಾರದ ಪ್ರಧಾನಿ ಲೊಬ್ಸಾಂಗ್ ಸಂಗೆ ಚೀನಾ ಕುರಿತಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ್ದು, ಟಿಬೆಟ್ ಗೆ ಆಗಿದ್ದೇ ಭಾರತಕ್ಕೂ ಆಗಬಹುದು ಎಂದು ಹೇಳಿದ್ದಾರೆ. 
ಡೊಕ್ಲಾಮ್ ವಿವಾದ ಹಾಗೂ ಭಾರತಕ್ಕೆ ಸೇರಿದ ಪ್ರದೇಶದಲ್ಲಿ ಚೀನಾ ನಿರಂತರವಾಗಿ ಅತಿಕ್ರಮಣ ಮಾಡುತ್ತಿರುವುದು ಚೀನಾದ ವಿಸ್ತರಣಾವಾದಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟಿಬೆಟ್ ಪ್ರಧಾನಿ ಲೊಬ್ಸಾಂಗ್ ಸಂಗೆ ಎಚ್ಚರಿಸಿದ್ದಾರೆ. 
ಚೀನಾದ ಚಾಣಾಕ್ಷ ನಡೆಯ ಬಗ್ಗೆ ಭಾರತ ಎಚ್ಚರದಿಂದ ಇರಬೇಕು. ಡೋಕ್ಲಾಮ್ ವಿವಾದದಲ್ಲಿ ಭಾರತ ಚೀನಾದ ರೈಟ್ ಹ್ಯಾಂಡ್ (ಟಿಬೆಟ್) ಹಾಗೂ ಫೈವ್ ಫಿಂಗರ್ಸ್(ಲದ್ದಾಕ್, ಸಿಕ್ಕಿಂ, ಭೂತಾನ್, ನೇಪಾಳ, ಅರುಣಾಚಲಪ್ರದೇಶ) ತಂತ್ರವನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಟಿಬೆಟ್ ಪ್ರಧಾನಿ ಹೇಳಿದ್ದಾರೆ. 
ಚೀನಾದ ನಾಯಕ ಮಾವೋ ಝೆಡಾಂಗ್ ಟಿಬೆಟ್ ನ್ನು ಚೀನಾದ ಬಲ ಅಂಗೈ ಎಂದೂ, ಸಿಕ್ಕೀಂ, ಭೂತಾನ್, ನೇಪಾಳ, ಅರುಣಾಚಲ ಪ್ರದೇಶವನ್ನು 5 ಬೆರಳುಗಳು ಎಂದೂ ಹೇಳಿದ್ದರು. 
SCROLL FOR NEXT