ದೇಶ

ತೆರಿಗೆ ವಂಚಕರ ವಿರುದ್ಧ ಕಾನೂನು ಕ್ರಮದಲ್ಲಿ ಗಣನೀಯ ಏರಿಕೆ

Srinivas Rao BV
ನವದೆಹಲಿ: ತೆರಿಗೆ ವಂಚಕರ ವಿರುದ್ಧದ ಕಾನೂನು ಕ್ರಮದಲ್ಲಿ ಗಣನೀಯ ಏರಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 
2017-18 ಅವಧಿಯಲ್ಲಿ (ನವೆಂಬರ್ 2017) ವರೆಗೆ ವಿವಿಧ ಅಪರಾಧಗಳ ಅಡಿಯಲ್ಲಿ ಒಟ್ಟು 2225 ಪ್ರಕರಣಳಿಗೆ ಸಂಬಂಧಿಸಿದಂತೆ ಕಾನೂನು ಕ್ರಮ ಜರುಗಿಸಿದೆ. ಕಳೆದ ವರ್ಷ ಈ ಸಂಖ್ಯೆ ಕೇವಲ 784 ಆಗಿತ್ತು ಎಂದು ಇಲಾಖೆ ಮಾಹಿತಿ ನೀಡಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ.184 ರಷ್ಟು ಪ್ರಕರಣಗಳು ಹೆಚ್ಚಾಗಿದ್ದು, 
ಉದ್ದೇಶಪೂರ್ವಕವಾಗಿ ತೆರಿಗೆ ವಂಚನೆ ಮಾಡಿರುವುದು, ಸುಳ್ಳು ಮಾಹಿತಿ ನೀಡಿರುವುದೂ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವುದರ ಪರಿಣಾಮವಾಗಿ ಶಿಕ್ಷೆಗೊಳಗಾಗಿರುವ ಅಪರಾಧಿಗಳೂ ಹೆಚ್ಚಾಗಿದ್ದಾರೆ ಎಂದು ಐಟಿ ಇಲಾಖೆ ಹೇಳಿದೆ.
SCROLL FOR NEXT