ಮುಂಬೈ: ಮಹಾರಾಷ್ಟ್ರದ ಯವತ್ಮಾಲ್ ನಲ್ಲಿ ಹಿಂದೂ ಸಂಪ್ರದಾಯದಂತೆ ಚೀನಾದ ಯುವಕನೊಂದಿಗೆ ಭಾರತೀಯ ಯುವಕ ಸಲಿಂಗ ಮದುವೆ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ಯವತ್ಮಾಲ್ ನ ಯುವಕ ಹಿಂದೂವಾಗಿದ್ದು ಅಮೆರಿಕಕ್ಕೆ ಉದ್ಯೋಗಕ್ಕೆ ತೆರಳಿದ್ದಾಗ ಅಲ್ಲಿ ಈತನಿಗೆ ಚೀನಾದ ಯುವಕನ ಪರಿಚಯವಾಗಿತ್ತು. ಅಂತೆಯೇ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದ್ದು ವಿವಾಹವಾಗಲು ನಿರ್ಧರಿಸಿದ್ದರು.
ಗುರುವಾರ ಇಬ್ಬರ ವಿವಾಹ ಅದ್ಧೂರಿಯಾಗಿ ನೆರವೇರಿತು. ಕುಟುಂಬಸ್ಥರೇ ಮುಂದೆ ನಿಂತು ಸಂಪ್ರದಾಯದಂತೆ ಸಲಿಂಗ ವಿವಾಹ ನೆರವೇರಿಸಿದ್ದಾರೆ. ಮೊದಲಿಗೆ ಯವತ್ಮಾಲ್ ಯುವಕ ತಂದೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಕೊನೆಗೆ ವಿಧಿ ಇಲ್ಲದೆ ಮಗನ ಸಲಿಂಗ ಮದುವೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಭಾರತೀಯ ಹಾಗೂ ಚೀನಾ ಯುವಕನ ಸಲಿಂಗ ವಿವಾಹ ಭಾರೀ ಚರ್ಚೆ ಹುಟ್ಟು ಹಾಕಿದ್ದು ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.