ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಬಿಜೆಪಿ ವಲಸಿಗ ನೌಕರರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನಡೆಸಿಕೊಳ್ಳುತ್ತಿದೆ: ರಾಹುಲ್ ಗಾಂಧಿ

ಪಾಸ್ಪೋರ್ಟ್ ಬಣ್ಣವನ್ನು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ವಲಸಿಗ ನೌಕರರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನಡೆಸಿಕೊಳ್ಳುತ್ತಿದೆ

ರಾಹುಲ್ ಗಾಂಧಿ
Srinivas Rao BV
Updated On : 16 Jan 2018, 1:28 am
ನವದೆಹಲಿ: ಪಾಸ್ಪೋರ್ಟ್ ಬಣ್ಣವನ್ನು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಟೀಕಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ವಲಸಿಗ ನೌಕರರನ್ನು ಎರಡನೇ ದರ್ಜೆ ನಾಗರಿಕರನ್ನಾಗಿ ನಡೆಸಿಕೊಳ್ಳುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 
ಪಾಸ್ಪೋರ್ಟ್ ಬಣ್ಣವನ್ನು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ತಾರತಮ್ಯ ನೀತಿಯನ್ನು ತೊರಿಸುತ್ತದೆ ಭಾರತದ ವಲಸಿಗ ನೌಕರರನ್ನು ಬಿಜೆಪಿ ಎರಡನೇ ದರ್ಜೆ ನೌಕರರಂತೆ ನಡೆಸಿಕೊಳ್ಳುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. 
ಇಸಿಆರ್ ಸ್ಟೇಟಸ್ ಇರುವ ಪಾಸ್ಪೋರ್ಟ್ ಗಳ ಬಣ್ಣವನ್ನು ನೀಲಿಯಿಂದ ಕಿತ್ತಳೆ ಬಣ್ಣಕ್ಕೆ ಬದಲಾಯಿಸಲು ಕೇಂದ್ರ ಸರ್ಕಾರ ಜ.12 ರಂದು ನಿರ್ಧರಿಸಿತ್ತು. ಸರ್ಕಾರಿ ಅಧಿಕಾರಿಗಳಿಗೆ ಬಿಳಿ ಬಣ್ಣದ ಪಾಸ್ಪೋರ್ಟ್, ರಾಜತಾಂತ್ರಿಕ ಅಧಿಕಾರಿಗಳಿಗೆ ಕೆಂಪುಬಣ್ಣದ ಪಾಸ್ಪೋರ್ಟ್, ಹಾಗೂ ಸಾಮಾನ್ಯ ಜನರಿಗೆ ನೀಲಿ ಬಣ್ಣದ ಪಾಸ್ಪೋರ್ಟ್ ನ್ನು ನೀಡಲಾಗುತ್ತಿದೆ. ಈಗ ವಲಸೆ ಹೋಗುವ ನಾಗರಿಕರಿಗೆ ಕಿತ್ತಳೆ ಬಣ್ಣದ ಪಾಸ್ಪೋರ್ಟ್ ನ್ನು ನೀಡಲಾಗುತ್ತಿದೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement