ದೇಶ

ತಮಿಳುನಾಡು: ಪೊಂಗಲ್ ಗೆ ಮಧುರೈಯಲ್ಲಿ ಜಲ್ಲಿಕಟ್ಟು ಕ್ರೀಡೆ ಆರಂಭ

Sumana Upadhyaya
ಮಧುರೈ: ಸಂಕ್ರಾಂತಿ ಕಾಲದಲ್ಲಿ ತಮಿಳು ನಾಡಿನ ಖ್ಯಾತ ಗೂಳಿಯ ಜಲ್ಲಿಕಟ್ಟು ಮೂರು ದಿನಗಳ ಕ್ರೀಡೆ ಆರಂಭಗೊಂಡಿದೆ.
ಈ ವರ್ಷ ಜಲ್ಲಿಕಟ್ಟಿನಲ್ಲಿ ಸುಮಾರು 1000 ಗೂಳನ್ನು ಪಳಗಿಸುವವರು ಮತ್ತು 3,000 ಗೂಳಿಗಳು ಭಾಗವಹಿಸುವ ನಿರೀಕ್ಷೆಯಿದೆ.
ತಮಿಳುನಾಡಿನ ಮಧುರೈಯಲ್ಲಿ ಪ್ರತಿವರ್ಷ ಪೊಂಗಲ್ ಹಬ್ಬದ ಸಮಯದಲ್ಲಿ ಜಲ್ಲಿಕಟ್ಟು ಕ್ರೀಡೆ ನಡೆಯುತ್ತದೆ.
ಜಲ್ಲಿಕಟ್ಟು ಕ್ರೀಡೆಯಲ್ಲಿ ಭಾಗವಹಿಸುವವರು ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಕಳೆದ ವಾರ ಮಧುರೈ ಜಿಲ್ಲಾಡಳಿತ ಕಡ್ಡಾಯ ಮಾಡಿತ್ತು. ಆದರೆ ಭಾಗವಹಿಸುವವರಿಂದ ತೀವ್ರ ಪ್ರತಿಭಟನೆ ಕೇಳಿಬಂದ ಹಿನ್ನೆಲೆಯಲ್ಲಿ ಆದೇಶವನ್ನು ಹಿಂತೆಗೆದುಕೊಳ್ಳಲಾಗಿತ್ತು. 
ತಮಿಳು ನಾಡಿನಾದ್ಯಂತ ಇಂದು ಜನರು ಪೊಂಗಲ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮಳೆ, ಸೂರ್ಯದೇವರು ಮತ್ತು ಎತ್ತುಗಳನ್ನು ಪೂಜಿಸುತ್ತಿದ್ದಾರೆ.
ಜನರು ಬೆಳಗ್ಗೆಯೇ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ದೇವಸ್ಥಾನಗಳಿಗೆ ಹೋಗುತ್ತಿದ್ದಾರೆ.
ಗೇರು ಬೀಜವನ್ನು ತುಪ್ಪದಲ್ಲಿ ಹುರಿದು, ಬಾದಾಮಿ ಮತ್ತು ಏಲಕ್ಕಿಯ ಘಮ ಮನೆಯಿಡೀ ಪಸರಿಸುತ್ತಿದೆ. ಅನ್ನ, ಬೆಲ್ಲ ಮತ್ತು ಕಡಲೆಯನ್ನು ತಯಾರಿಸಲಾಗಿದೆ.
ಮಣ್ಣಿನ ಮಡಕೆ ಅಥವಾ ಸ್ಟೈನ್ ಲೆಸ್ ಸ್ಟೀಲ್ ನ್ನು ಖಾದ್ಯ ತಯಾರಿಸಲು ಇಂದು ಬಳಸುತ್ತಿದ್ದು, ಪಾತ್ರವನ್ನು ಹೊರಗಿನಿಂದ ಶುಂಠಿ, ಅರಶಿನ, ಕಬ್ಬು ಮತ್ತು ಬಾಳೆಹಣ್ಣುಗಳಿಂದ ಅಲಂಕರಿಸಲಾಗುತ್ತದೆ.
ಸೂರ್ಯದೇವರಿಗೆ ಪೊಂಗಲ್ ನ್ನು ನೇವೇದ್ಯ ಮಾಡಿ ಪ್ರಸಾದವೆಂದು ಸ್ವೀಕರಿಸಲಾಗುತ್ತದೆ. ಜನರು ತಮ್ಮ ಮನೆಯಲ್ಲಿ ಮಾಡಿರುವ ಎಳ್ಳು, ಬೆಲ್ಲ, ನೇವೇದ್ಯ ಪ್ರಸಾದಗಳನ್ನು ನೆರೆಹೊರೆಯವರೊಂದಿಗೆ ಹಂಚಿ ತಿನ್ನುತ್ತಾರೆ.
SCROLL FOR NEXT