ಜಿಂದ್(ಹರಿಯಾಣ): ಹದಿನೈದು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಹತ್ಯೆ ಮಾಡಿರುವ ಘಟನೆ ಹರಿಯಾಣದ ಜಿಂದ್ ಪ್ರದೇಶದಲ್ಲಿ ನಡೆದಿದೆ.
ಮೃಗೀಯವಾಗಿ ವರ್ತಿಸಿದ್ದ ಕಾಮುಕರು ಆಕೆಯ ದೇಹದ ನಾನಾ ಭಾಗಗಳಿಗೆ ಮನಸೋ ಇಚ್ಚೆ ಚುಚಿದ್ದಾರೆ.ಕೆಲ ಸೂಕ್ಷ್ಮ ಅಂಗಾಗಗಳ ಮೇಲೆ ಕಬ್ಬೀಣದ ರಾಡ್ ಮಾದರಿ ವಸ್ತುವಿನಿಂದ ಚುಚ್ಚಿರುವ ಸಂಗತಿ ಆಕೆಯ ಮರಣೋತ್ತರ ಪರೀಕ್ಷೆಯಿಂದ ಸಾಬೀತಾಗಿದೆ.
ಹರಿಯಾಣ ಜಿಂದ್ ಜಿಲ್ಲೆಯ ಬಧಾಖೇರಾ ಗ್ರಾಮದ ನಾಲೆಯಲ್ಲಿ ಮೈಮೇಲೆ ಗಾಯಗಳಿದ್ದ ಅಪ್ರಾಪ್ತ ಬಾಲಕಿಯ ಮೃತದೇಹ ಭಾನುವಾರ ದೊರಕಿತ್ತು. "ಬಾಲಕಿಯ ದೇಹದ ಒಳಗೆ ಸಹ ಗಾಯ ಕಂಡುಬಂದಿದೆ, ಅವಳ ಯಕೃತ್ತು ಛಿದ್ರಗೊಂಡಿದೆ ಮತ್ತು ಲೈಂಗಿಕ ಆಕ್ರಮಣದಿಂದ ಆ ಗಾಯಗಳಾಗಿರುವುದು ಖಚಿತ. ಅವಳ ಖಾಸಗಿ ಅಂಗಗಳಿಗೆ ಗಾಯಗಳಾಗಿರುವುದು ಗೋಚರವಾಗಿದೆ. ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಈ ಕೃತ್ಯದಲ್ಲಿ ತೊಡಗಿದ್ದರೆಂದು ಕಾಣುತ್ತಿದೆ" ರೋಹ್ತಕ್ ಆಸ್ಪತ್ರೆಯ ವೈದ್ಯರಾದ ಡಾ. ಎಸ್.ಕೆ. ದತ್ತರ್‌ವಾಲಾ ಎಎನ್ ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
"ನಾವು ಮೃತದೇಹವನ್ನು ಡಯಾಟಮ್ ಪರೀಕ್ಷೆಗೆ ಗುರಿಪಡಿಸಿದ್ದೆವು." ವೈದ್ಯರು ಹೇಳಿದರು.
ಬಾಲಕಿಯ ದೇಹದ ಎದೆ ಬಾಗದಿಂದ ಕೆಳಗೆ ಯಾವ ಬಟ್ಟೆಗಳೂ ಇರದೆ ನಗ್ನವಾದ ಸ್ಥಿತಿಯಲ್ಲಿ ಮೃತದೇಹ ದೊರಕಿತ್ತೆಂದು ಅವರು ಹೇಳಿದರು.
ಈ ನಡುವೆ ಮೃತ ಬಾಲಕಿಯ ಗುರುತು ಪತ್ತೆಯಾಗಿದ್ದು ಈಕೆ ಕುರುಕ್ಷೇತ್ರದವಳಾಗಿದ್ದು ಕಳೆದ ಜ.9 ರಿಂದಲೂ ಕಾಣೆಯಾಗಿದ್ದಳು ಎನ್ನಲಾಗಿದೆ.
ಇದೇ ವೇಳೆ ಬಾಲಕಿಯ ಕುಟುಂಬ, ಸಂಬಂಧಿಕರು ಬಾಲಕಿಯ ಮೃತದೇಹವನ್ನು ಪಡೆಯಲು ಒಪ್ಪದೆ ಪ್ರತಿಭಟನೆಗೆ ಇಳಿದಿದ್ದಾರೆ. "ನನ್ನ ಮಗಳನ್ನು ಅಪಹರಿಸಿ ಅತ್ಯಾಚಾರವೆಸಗಲಾಗಿದೆ. ಈ ದುಷ್ಕೃತ್ಯ ಎಸಗಿದ ಅಪರಾಧಿಗಳು ಶಿಕ್ಷೆಗೆ ಒಳಗಾಗಬೇಕು, ನಮ್ಮ ಮಗಳಿಗೆ ನ್ಯಾಯ ಸಿಗಬೇಕು. ಸರ್ಕಾರ ಈ ನಿತ್ಟಿನಲ್ಲಿ ಕಠಿಣ ಕ್ರಮ ತೆಗೆದುಕೊಂಡದ್ದಾದರೆ ಇನ್ನೆಂದೂ ಇಂತಹಾ ಘಟನೆ ಸಂಭವಿಸುವುದಿಲ್ಲ." ಮೃತ ಬಾಲಕಿಯ ತಂದೆ ಎಎನ್ ಐ ಗೆ ತಿಳಿಸಿದ್ದಾರೆ.
"ನನ್ನ ಮಗಳಿಗೆ ಆಕೆಯ ಚಿಕ್ಕಮ್ಮ ಪಾಠ ಹೇಳಿಕೊಡುವುದಕ್ಕಾಗಿ ಅವಳ ಮನೆಗೆ ಕರೆದೊಯ್ದಿದ್ದರು. ಆಕೆ ಶಿಕ್ಷಕಿಯಾಗಿದ್ದಳು. ಆದರೆ ಅಂದು ಪಾಠಕ್ಕೆ ಹೋದ ಮಗಳು ಮತ್ತೆ ಮನೆಗೆ ಹಿಂದಿರುಗಿರಲಿಲ್ಲ. ನಾವು ಈ ಸಂಬಂಧ ಪೋಲೀಸಾರಿಗೆ ದೂರು ಸಲ್ಲಿಸಿದ್ದೆವು." ಬಾಲಕಿಯ ತಂದೆ ಹೇಳಿದ್ದಾರೆ.
ಈ ನಡುವೆ ಹರಿಯಾಣ ಮುಖ್ಯಮಂತ್ರಿ ಎಂ.ಎಲ್. ಖಟ್ಟರ್ ಪ್ರಕರಣವನ್ನು ಪೋಲೀಸರು ಶೀಘ್ರವೇ ಬೇಧಿಸಲಿದ್ದು ನಿಜವಾದ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.