ಕೇಂದ್ರ ಸರ್ಕಾರಿ ಕಿರಿಯ ಮಟ್ಟದ ನೌಕರರಿಗೆ ವೇತನ ಹೆಚ್ಚಳ? 
ದೇಶ

ಕೇಂದ್ರ ಸರ್ಕಾರಿ ಕಿರಿಯ ಮಟ್ಟದ ನೌಕರರಿಗೆ ವೇತನ ಹೆಚ್ಚಳ?

ಕೇಂದ್ರ ಸರ್ಕಾರದ ಕಿರಿಯ ಮಟ್ಟದ ನೌಕರರಿಗೆ ವೇತನ ಹೆಚ್ಚಳ ಮಾಡುವುದಕ್ಕೆ ಸರ್ಕಾರ ಸಿದ್ಧತೆ ನಡೆಸಿದ್ದು, ವೇತನ ಮ್ಯಾಟ್ರಿಕ್ಸ್ ಮಟ್ಟ 5 ಕ್ಕಿಂತ ಕಡಿಮೆ ಇರುವ ನೌಕರರಿಗೆ ಶೀಘ್ರವೇ ವೇತನ ಹೆಚ್ಚಾಗಲಿದೆ.

ನವದೆಹಲಿ: ಕೇಂದ್ರ ಸರ್ಕಾರದ ಕಿರಿಯ ಮಟ್ಟದ ನೌಕರರಿಗೆ ವೇತನ ಹೆಚ್ಚಳ ಮಾಡುವುದಕ್ಕೆ ಸರ್ಕಾರ ಸಿದ್ಧತೆ ನಡೆಸಿದ್ದು, ವೇತನ ಮ್ಯಾಟ್ರಿಕ್ಸ್ ಮಟ್ಟ 5 ಕ್ಕಿಂತ ಕಡಿಮೆ ಇರುವ ನೌಕರರಿಗೆ ಶೀಘ್ರವೇ ವೇತನ ಹೆಚ್ಚಾಗಲಿದೆ. 
7 ನೇ ವೇತನ ಆಯೋಗದ ಶಿಫಾರಸ್ಸಿಗಿಂತಲೂ ಹೆಚ್ಚಾಗಿ ವೇತನ ಮ್ಯಾಟ್ರಿಕ್ಸ್ ಮಟ್ಟ 5 ಕ್ಕಿಂತ ಕಡಿಮೆ ಇರುವ ನೌಕರರ ವೇತನವನ್ನು ಹೆಚ್ಚು ಮಾಡುವುದನ್ನು ಕೇಂದ್ರ ಸರ್ಕಾರ ಪರಿಗಣಿಸಿರುವುದರ ಬಗ್ಗೆ ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 
ಎಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ವೇತನ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ಉಂಟಾಗುವ ಹೊರೆಯನ್ನೂ ಪರಿಗಣಿಸಿ ವೇತನ ಹೆಚ್ಚು ಮಾಡಲಾಗುವುದು, ಒಟ್ಟಾರೆ ನೌಕರರ ಸಂಘಟನೆಗಳ ಬೇಡಿಕೆಗೆ ಅನುಗುಣವಾಗಿ ವೇತನ ಹೆಚ್ಚಾಗಲಿದೆ, ಈ ಬಗ್ಗೆ ಕೆಲವೇ ವಾರಗಳಲ್ಲಿ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಅಧಿಕಾರಿ ಹೇಳಿದ್ದಾರೆ. 
ಹಿರಿಯ/ ಮಧ್ಯಮ ಮಟ್ಟದ ಅಧಿಕಾರಿಗಳ ವೇತನದಲ್ಲಿ ಯಥಾಸ್ಥಿತಿ 
ಇನ್ನು 7 ನೇ ವೇತನ ಆಯೋಗದ ಶಿಫಾರಸ್ಸಿನಲ್ಲಿ ಹಿರಿಯ/ ಮಧ್ಯಮ ಮಟ್ಟದ ಅಧಿಕಾರಿಗಳ ವೇತನ ಉತ್ತಮವಾಗಿಯೇ ಏರಿಕೆಯಾಗಿರುವುದರಿಂದ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ