ದೇಶ

ಜೋಧ್ ಪುರ: ಸುಖೋಯ್ 30 ಯುದ್ಧ ವಿಮಾನ ಹಾರಾಟ ನಡೆಸಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್

Raghavendra Adiga
ಜೋಧ್ ಪುರ: ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇಂದು(ಬುಧವಾರ) ರಾಜಸ್ಥಾನ ಜೋಧ್ ಪುರ ವಾಯುನೆಲೆಗೆ ಆಗಮಿಸಿದ್ದರು. ಈ ವೇಳೆ ಅವರು ಸುಖೋಯ್ 30 ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ್ದು ಸುಖೋಯ್ ನಲ್ಲಿ ಹಾರಾಟ ನಡೆಸಿದ ಭಾರತದ ಎರಡನೇ ಮಹಿಳೆ ಎನಿಸಿದರು.
ಈ ಮೊದಲು ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸುಖೋಯ್ ವಿಮಾನದಲ್ಲಿ ಹಾರಾಟ ನಡೆಸಿದ್ದರು. ಮಾಜಿ ರಾಷ್ಟ್ರಪತಿ, ಅಬ್ದುಲ್ ಕಲಾಂ ಸಹ ಈ ಯುದ್ಧ ವಿಮಾನ ಹಾರಾಟದಲ್ಲಿ ಪಾಲ್ಗೊಂಡಿದ್ದರು.
ದೇಶದ ಪ್ರಥಮ ಮಹಿಳಾ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ವಿಮಾನದ ಮಹಿಳಾ ಪೈಲಟಠಿಂಭಾಗದ ಆಸನದಲ್ಲಿ ಕುಳಿತು 45 ನಿಮಿಷಗಳ ಕಾಲ ಹಾರಾಟ ನಡೆಸಿದರು.
ಸುಖೋಯ್ ವಿಮಾನದ ಕಾರ್ಯಾಚರಣೆ ಹಾಗೂ ಒಟ್ಟಾರೆ ಸಾಮರ್ಥ್ಯದ ಪರಿಶೀಲನೆಗಾಗಿ ಸಚಿವೆ ಈ ಹಾರಾಟದಲ್ಲಿ ಭಾಗವಹಿಸಿದ್ದಾರೆ ಎಂದು ರಕ್ಷಣಾ ಸಚಿವಾಲಯ ಮೂಲಗಳು ತಿಳಿಸಿದೆ.
SCROLL FOR NEXT