ನೀಟ್ ಪರೀಕ್ಷೆ 2018: ಪ್ರಶ್ನೆ ಪತ್ರಿಕೆ ರಚನೆಗೆ ರಾಜ್ಯ ಪಠ್ಯಕ್ರಮ ಪರಿಗಣಿಸಲು ನಿರ್ಧಾರ
ನವದೆಹಲಿ: ಈ ವರ್ಷದಿಂದ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್) ಪ್ರಶ್ನೆ ಪತ್ರಿಕೆಗಳನ್ನು ರೂಪಿಸುವ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳ ಪಠ್ಯಕ್ರಮವನ್ನು ಪರಿಗಣಿಸಲು ಕೇಂದ್ರವು ನಿರ್ಧರಿಸಿದೆ.
ಕಳೆದ ವರ್ಷದ ತನಕ, ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆಗಳನ್ನು ಕೇಂದ್ರ ಮಾದ್ಯಮಿಕ ಶಿಕ್ಷಣ ಮಂಡಳಿ ಪಠ್ಯಕ್ರಮವನ್ನು ಆಧರಿಸಿ ರಚಿಸಲಾಗುತ್ತಿತ್ತು, ಇದು ರಾಜ್ಯ ಸರ್ಕಾರದ ಪಠ್ಯಕ್ರಮ ಕಲಿತ ವಿದ್ಯಾರ್ಥಿಗಳಿಗೆ ಕಠಿಣವಾಗುತ್ತಿತ್ತು. ಅನೇಕ ರಾಜ್ಯಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ಸೇರಿ ನಾನಾ ವಿಷಯಗಳ ಪಠ್ಯಕ್ರಮದಲ್ಲಿ ವ್ಯತ್ಯಾಸವಿರುವ ಕಾರಣ ವಿದ್ಯಾರ್ಥಿಗಳಿಗೆ ನೀಟ್ ಕಬ್ಬಿಣದ ಕಡಲೆ ಎನಿಸಿತ್ತು.
"ನಾವು ವಿಶೇಷ ಸಭೆಯನ್ನು ಕರೆದಿದ್ದೇವೆ, ನಾವು ನೀಟ್ ಗಾಗಿ ಪ್ರಶ್ನೆ ಪತ್ರಿಕೆಯೊಂದನ್ನು ರಚಿಸುವಾಗ ಎಲ್ಲಾ ರಾಜ್ಯ ಸರ್ಕಾರಗಳ ಪಠ್ಯಕ್ರಮವನ್ನು ಪರಿಗಣಿಸಬೇಕೆಂಡು ನಾವು ನಿರ್ಧರಿಸಿದ್ದೇವೆ, ಇದರಿಂದಾಗಿ ರಾಜ್ಯ ಪಠ್ಯಕ್ರಮ ಕಲಿತ ವಿದ್ಯಾರ್ಥಿಗಳಿಗೆ ಈ ವರ್ಷದ ನೀಟ್ ಪರೀಕ್ಷೆ ಯಾವ ರೀತಿಯಲ್ಲಿ ಕಷ್ಟವಾಗುವುದಿಲ್ಲ." ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
"ಸಮಸ್ಯೆಯನ್ನು ಈಗ ಸರಿಪಡಿಸಬೇಕಿದೆ. ಇನ್ನು ಮುಇಂದೆ ರಾಜ್ಯಗಳು ನೀಟ್ ವಿಚಾರವಾಗಿ ದೂರು ಸಲ್ಲಿಸಲು ಯಾವ ಕಾರಣವಿರುವುದಿಲ್ಲ. ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೂ ಇದರಿಂದ ಅನುಕೂಲವಾಗಲಿದೆ" ಜಾವಡೇಕರ್ ಹೇಳಿದರು.
ಆದರೆ ಕೆಲವು ಶಿಕ್ಷಣ ತಜ್ಞರು ಹೇಳುವಂತೆ ಎಲ್ಲಾ ಪಠ್ಯಕ್ರಮಗಳನ್ನು ಪರಿಗಣಿಸಿ ಪ್ರಶ್ನೆ ಪತ್ರಿಕೆ ರೂಪಿಸುವುದು ಕಠಿಣ ಕೆಲಸವಾಗಿದೆ.
ನೀಟ್ 2018, ಆಲ್-ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್) ಮತ್ತು ಜವಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಫೊಶ್ತ್ ಘೃಅಝೂಎಸಃಆಣ್ ಮೆಡಿಕಲ್ ಎಜುಕೇಷನ್ ಆಂಡ್ ರಿಸರ್ಚ್ ಹೊರತುಪಡಿಸಿ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ನಡೆಸುವ ಪರೀಕ್ಷೆ ಆಗಿದೆ. ಈ ಸಾಲಿನ ನೀಟ್ ಪರೀಕ್ಷೆ ಮೇ ಮೊದಲ ವಾರ ನಡೆಯುವ ಸಾಧ್ಯತೆ ಇದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics