ದೇಶ

ವಿಮಾನಯಾನದಲ್ಲೂ ಮೊಬೈಲ್ ಕರೆ, ಇಂಟರ್ ನೆಟ್ ಸೇವೆ ಒದಗಿಸಲು ಟ್ರಾಯ್ ಪ್ರಸ್ತಾವನೆ

Srinivas Rao BV
ನವದೆಹಲಿ: ಸ್ಯಾಟಲೈಟ್ ಹಾಗೂ ಟೆರಿಸ್ಟ್ರಿಯಲ್ ನೆಟ್ವರ್ಕ್ ನ ಸಹಾಯದಿಂದ ವಿಮಾನ ಪ್ರಯಾಣದ ಸಮಯದಲ್ಲಿ ಪ್ರಯಾಣಿಕರಿಗೆ ಮೊಬೈಲ್ ಕರೆ, ಇಂಟರ್ ನೆಟ್ ಸೇವೆಗಳನ್ನು ಒದಗಿಸಲು ಟ್ರಾಯ್ ಪ್ರಸ್ತಾವನೆ ನೀಡಿದೆ.  
ವಿಮಾನಯಾನದ ಸಂದರ್ಭದಲ್ಲಿ ಮೊಬೈಲ್ ಸಂಭಾಷಣೆ ಹಾಗೂ ಇಂಟರ್ ನೆಟ್ ಸೇವೆಗಳನ್ನು ಒದಗಿಸುವಂತೆ ಟ್ರಾಯ್ ಇನ್ ಫ್ಲೈಟ್ ಕನೆಕ್ಟಿವಿಟಿ (ಐಎಫ್ ಸಿ) ಶಿಫಾರಸ್ಸುಗಳಲ್ಲಿ ಹೇಳಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ 2017 ರ ಆಗಸ್ಟ್ 10 ರಂದು ಟೆಲಿಕಾಂ ಇಲಾಖೆ ಟ್ರಾಯ್ ಅಭಿಪ್ರಾಯ ಕೇಳಿತ್ತು. 
ವಿಮಾನಯಾನದ ವೇಳೆ ಕರೆ, ಇಂಟರ್ ನೆಟ್ ಸೌಲಭ್ಯಗಳನ್ನು ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಟ್ರಾಯ್ ಶಿಫಾರಸ್ಸುಗಳನ್ನು ಮುಂದಿಟ್ಟಿದ್ದು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಐಎಫ್ ಸಿ ಸೇವೆಗಳು ಅಂತಾರಾಷ್ಟ್ರೀಯ ದರ್ಜೆಯಲ್ಲಿರಬೇಕು ಎಂದು ಹೇಳಿದ್ದು, ಇದರಿಂದ ಯಾವುದೇ ಹಾನಿ ಸಂಭವಿಸುವುದಿಲ್ಲ ಎಂದು ಹೇಳಿದೆ. 
SCROLL FOR NEXT