ನಾಸಿಕ್: 2013ರಲ್ಲಿ ಅಹಮದಾಬಾದ್ ನಲ್ಲಿ ಮೂವರು ದಲಿತ ಯುವಕರ ಮರ್ಯಾದಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಸಿಕ್ ಜಿಲ್ಲಾ ಕೋರ್ಟ್ ಆರು ಮಂದಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಕಳೆದ ಸೋಮವಾರ ಆರು ಮಂದಿ ಅಪರಾಧಿಗಳು ಎಂದು ತೀರ್ಪು ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಅಪರಾಧಿಗಳ ಶಿಕ್ಷೆ ಪ್ರಮಾಣದ ಮೇಲೆ ನಿರೀಕ್ಷೆ ಹೆಚ್ಚಾಗಿತ್ತು. ಅಂತೆ ನ್ಯಾಯಾಧೀಶರು ಆರು ಮಂದಿ ಅಪರಾಧಿಗಳಿಗೆ ಮರಣದಂಡನೆ ತೀರ್ಪು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರಿ ವಕೀಲರಾದ ಉಜ್ವಲ್ ನಿಕಮ್ ಅವರು ನ್ಯಾಯಾಧೀಶರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಜತೆಗೆ ಸಂತ್ರಸ್ತ ಕುಟುಂಬಕ್ಕೆ ತಲಾ 20 ಸಾವಿರ ಪರಿಹಾರ ನೀಡುವಂತೆ ಆರು ಮಂದಿ ಅಪರಾಧಿಗಳಿಗೆ ದಂಡ ವಿಧಿಸಿದ್ದಾರೆ ಎಂದರು.
ಮೂವರು ದಲಿತ ಯುವಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಪಟ್ ವಿ. ದರಂದಲೆ, ಗಣೇಶ್ ಪಿ ದರಂದಲೆ, ಪ್ರಕಾಶ್ ವಿ. ದರಂದಲೆ, ರಮೇಶ್ ವಿ.ದರಂದಲೆ, ಅಶೋಕ್ ನವಗಿರಿ ಮತ್ತು ಸಂದೀಪ್ ಕುರ್ರೆ ಗಲ್ಲು ಶಿಕ್ಷೆಗೆ ಗುರಿಯಾದ ಅಪರಾಧಿಗಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ಕೊರತೆ ಹಿನ್ನೆಲೆ ಅಶೋಕ್ ಆರ್ ಪಾಲ್ಕೆ ಯನ್ನು ನಿರಪರಾಧಿ ಎಂದು ಘೋಷಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics