ಹೈದರಾಬಾದ್: ಮಲೇಷಿಯಾದಲ್ಲಿ ಮಾಲಿಕರಿಂದ ಕಿರುಕುಳಕ್ಕೆ ಒಳಗಾದ ಆರು ಮಂದಿ ಭಾರತೀಯರನ್ನು ಮತ್ತೆ ಭಾರತಕ್ಕೆ ಕರೆತರಲು ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಸಂಪರ್ಕಿಸಲಾಗಿದೆ.
ತಮ್ಮ ವಿರುದ್ಧ ಮಾಲಿಕರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ರಾಯಭಾರಿ ಕಚೇರಿಯನ್ನು ಭಾರತೀಯರು ಸಂಪರ್ಕಿಸಿದ್ದಾರೆ.
ಎಜೆಂಟ್ ವೊಬ್ಬರು ನನ್ನ ತಂದೆಯನ್ನು ಮೋಸ ಮಾಡಿ ಮಲೇಷಿಯಾಕ್ಕೆ ಹೋದರು. ಇದಕ್ಕಿಂತಲೂ ಮೊದಲು ತಮ್ಮ ತಂದೆಯನ್ನು ಒಬ್ಬರು ಸಂಪರ್ಕಿಸಿ ಮಲೇಷಿಯಾದಲ್ಲಿ ಉದ್ಯೋಗವಿದೆಯೆಂದು ತಿಳಿಸಿದರು. ತಿಂಗಳಿಗೆ 25ರಿಂದ 30 ಸಾವಿರ ರೂಪಾಯಿ ನೀಡಿ ಆಹಾರ, ವಸತಿ ಎಲ್ಲವನ್ನೂ ಕಂಪೆನಿ ನೀಡಲಿದೆ ಎಂದು ಹೇಳಿ ನಂಬಿಸಿ ಕರೆದುಕೊಂಡು ಹೋದರು ಎಂದು ಅನೀಸ್ ಅಹ್ಮದ್ ಖಾನ್ ಎಂಬವರ ಪುತ್ರ ಐಜಾದ್ ಅಹ್ಮದ್ ಖಾನ್ ಹೇಳುತ್ತಾರೆ.
ಮಲೇಷಿಯಾಕ್ಕೆ ಹೋದ ನಂತರ ತನಗೆ ಕೆಲಸವಿಲ್ಲವೆಂದು ಖಾನ್ ಅವರಿಗೆ ಗೊತ್ತಾಯಿತಂತೆ. ಹೀಗೆ ಮತ್ತೆ ಐವರು ತಮ್ಮ ಉದ್ಯೋಗ ಕಳೆದುಕೊಂಡಿದ್ದು, ಈ ಘಟನೆ ನಡೆದು ಮೂರು ತಿಂಗಳುಗಳಾಗಿವೆ.
ಕಳೆದ ಮೂರು ತಿಂಗಳುಗಳಿಂದ ವೇತನ ನೀಡದೆ ಸತತವಾಗಿ ಕಿರುಕುಳ ನೀಡುತ್ತಿದ್ದು, ಅದನ್ನು ತಾಳಲಾರದೆ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics