ದೇಶ

ಭೂಪಾಲ್: ಅತ್ಯಾಚಾರ ಸಂತ್ರಸ್ತೆಯಿಂದ ಮುಖ್ಯಮಂತ್ರಿ ನಿವಾಸದೆದುರು ಆತ್ಮಹತ್ಯೆಗೆ ಯತ್ನ

Raghavendra Adiga
ಭೂಪಾಲ್: ಅತ್ಯಾಚಾರ ಸಂತ್ರಸ್ತೆಯೊಬ್ಬಳು ಮದ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮನೆ ಎದುರೇ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆಯೊಂದು ವರದಿಯಾಗಿದೆ. 
ಹೀಗೆ  ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರಆಗಿದ್ದು ಭೂಪಾಲ್ ನ ಹಮೀದಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅತ್ಯಾಚಾರವೆಸಗಿದ ಆರೋಪಿಯ ವಿರುದ್ಧ ಪೋಲೀಸರು ಯಾವ ಕ್ರಮ ತೆಗೆದುಕೊಳ್ಳಲಿಲ್ಲ. ಆರೋಪಿ ಜಾಮೀನು ಪಡೆದಿದ್ದು ಜೈಲಿನಿಂದ ಹೊರಬಂದಿದ್ದಾನೆ, ರಾಜಾರೋಷವಾಗಿ ತಿರುಗುತ್ತಿದ್ದಾನೆ ಎಂದು ಹೇಳಲಾಗಿದ್ದು ಇದೇ ಕಾರಣದಿಂದ ಮನನೊಂದ ಸಂತ್ರಸ್ತ ಮಹಿಳೆ ಮುಖ್ಯಮಂತ್ರಿಗಳ ನಿವಾಸದೆದುರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
SCROLL FOR NEXT