ದೇಶ

ಭಾರತ, ವಿಶ್ವದ ಮಹಿಳೆಯರ ಸಬಲೀಕರಣಕ್ಕಾಗಿ ಮಲಾಲಾ ಫೌಂಡೇಶನ್ ನೊಂದಿಗೆ ಕೈ ಜೋಡಿಸಿದ ಆ್ಯಪಲ್

Srinivas Rao BV
ಲಂಡನ್: ಭಾರತ ಹಾಗೂ ಇತರ ದೇಶಗಳಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಆ್ಯಪಲ್ ಸಂಸ್ಥೆ ಮಲಾಲಾ ಫೌಂಡೇಶನ್ ನೊಂದೊಗೆ ಕೈ ಜೋಡಿಸಿದೆ. 
ಆ್ಯಪಲ್ ಸಂಸ್ಥೆ ಈ ಬಗ್ಗೆ ಜ.22 ರಂದು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದು, ಮಲಾಲಾ ಫೌಂಡೇಶನ್ ನಿಂದ ಯುವತಿಯರಿಗೆ ವಿದ್ಯಾಭ್ಯಾಸಕ್ಕಾಗಿ ನೀಡುವ ಆರ್ಥಿಕ ನೆರವನ್ನು ದುಪ್ಪಟ್ಟು ಮಾಡುಲು ನಿರ್ಧರಿಸಲಾಗಿದೆ ಎಂದು ಮಲಾಲಾ ಫೌಂಡೇಶನ್ ಹೇಳಿದೆ. 
ಅಫ್ಘಾನಿಸ್ತಾನ, ಪಾಕಿಸ್ತಾನ, ಲೆಬೆನಾನ್, ಟರ್ಕಿ, ನೈಜೀರಿಯಾ ಗಳಲ್ಲಿ ಆ್ಯಪಲ್ ಸಂಸ್ಥೆಯ ಸಹಕಾರದಿಂದ ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಹೆಚ್ಚಿನ ಸಹಾಯ ಮಾಡಲು ಮಲಾಲಾ ಫೌಂಡೇಶನ್ ನಿರ್ಧರಿಸಿದೆ. ಪ್ರತಿ ಮಹಿಳೆಯೂ ಸಹ ತನ್ನ ಭವಿಷ್ಯವನ್ನು ತಾನೇ ರೂಪಿಸಿಕೊಳ್ಳುವಂತಾಗಬೇಕು ಎಂಬುದು ನನ್ನ ಕನಸು ಎಂದು ಮಲಾಲಾ ಹೇಳಿದ್ದು, ಮಲಾಲಾ ಫೌಂಡೇಶನ್ ನ ಭಾಗವಾಗಿರುವ ಮೊದಲ ಗಣ್ಯ ಸಂಸ್ಥೆ ಆ್ಯಪಲ್ ಆಗಿದೆ. 
SCROLL FOR NEXT