ದೇಶ

ಗಣರಾಜ್ಯೋತ್ಸವಕ್ಕೆ ಪ್ರಧಾನಿ ಮನ್ ಕಿ ಬಾತ್ ಕಾರ್ಯಕ್ರಮದ ಟ್ಯಾಬ್ಲೋ

Raghavendra Adiga
ನವದೆಹಲಿ: ಇದೇ ಮೊದಲ ಬಾರಿಗೆ ಆಲ್ ಇಂಡಿಯಾ ರೇಡಿಯೋದ ಟ್ಯಾಬ್ಲೋ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಲಿದೆ. ಮತ್ತು ಇದು ಪ್ರಧಾನಿಗಳ ಜನಪ್ರಿಯ ಮನ್ ಕಿ ಬಾತ್ ಕಾರ್ಯಕ್ರಮದ ಭಿತ್ತಿಚಿತ್ರವನ್ನು ಪ್ರದರ್ಶಿಸಲಿದೆ..
ಮಹಾತ್ಮ ಗಾಂಧಿ ಮೊದಲ ಬಾರಿಗೆ ಪ್ರಯಾಣ ಮಾಡುವ ದೃಶ್ಯ, ದೇಶ ವಿಭಜನೆ ನಂತರ ಉಂಟಾದ ಕೋಮು ಗಲಭೆ, ಪ್ರಧಾನಿಗಳ ಮಾಸಿಕ ಕಾರ್ಯಕ್ರಮ ಮನ್ ಕಿ ಬಾತ್ ಗಳನ್ನು ಈ ಪ್ರದರ್ಶನ ಒಳಗೊಳ್ಳುತ್ತದೆ ಎಂದು ಆಲ್ ಇಂಡಿಯಾ ರೇಡಿಯೋ ಹೇಳಿದೆ.
ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಒಟ್ಟು 23 ಟ್ಯಾಬ್ಲೋ ಗಳು ಇರಲಿದ್ದು ಇದರಲ್ಲಿ ಹದಿನಾಲ್ಕು ವಿವಿಧ ರಾಜ್ಯ ಹಾಗು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿರುತ್ತದೆ ಎಂದು ರಕ್ಷಣಾ ಇಲಾಖೆಯ ಪಿಆರ್ ಓ ನಂಪಿಬೌ ಮರಿನ್ಮಾ ಹೇಳಿದ್ದಾರೆ. ಉಳಿದವುಗಳು ಕೇಂದ್ರ ಸರ್ಕಾರದ ವಿವಿಧ ಇಲಾಖೆ ಹಾಗೂ ವಿಭಾಗಗಳಿಗೆ ಸೇರಿರುತ್ತದೆ ಎಂದು ಅವರು ಹೇಳಿದರು.
"ಕಳೆದ ವರ್ಷ ಮೇ ತಿಂಗಳಲ್ಲಿ ಈ ಕಲ್ಪನೆಯನ್ನು ಪ್ರಸ್ತಾಪಿಸಲಾಗಿತ್ತು,ಹಲವು ಸುತ್ತಿನ ಮಾತುಕತೆ ಬಳಿಕ ಇದಕ್ಕೆ ಇಂದು ಸ್ಪಷ್ಟ ರೂಪ ಸಿಕ್ಕಿದೆ. ಇದು ಆಲ್ ಇಂಡಿಯಾ ರೇಡಿಯೋ ನ ಪ್ರಥಮ ಟ್ಯಾಬ್ಲೋ ಆಗಿದ್ದು ರೇಡಿಯೋಿದೇ ಪ್ರಥಮ ಬಾರಿಗೆ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗವಹಿಸಲಿದೆ ಎಂಡು ಎಐಆರ್ ಅಧಿಕಾರಿಗಳು ಹೇಲಿದ್ದಾರೆ.
SCROLL FOR NEXT