ನವದೆಹಲಿ: ಮಾರ್ಚ್ ವೇಳೆಗೆ ಬಹು ನಿರೀಕ್ಷಿತ ಆಧಾರ್ ಮಾಹಿತಿ ರಕ್ಷಣೆ ಮಸೂದೆ ಸಿದ್ಧವಾಗಲಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನಿಕ ಪೀಠ, ಆಧಾರ್ ಸಾಂವಿಧಾನಿಕ ಮಾನ್ಯತೆ ಕುರಿತ ಅರ್ಜಿಗಳ ವಿಚಾರಣೆ ನಡೆಸುತ್ತಿದ್ದು, ನಿವೃತ್ತ ನ್ಯಾಯಮೂರ್ತಿ ಬಿಎನ್ ಶ್ರೀಕೃಷ್ಣ ಅವರ ನೇತೃತ್ವದ ತಜ್ಞರ ಸಮಿತಿ ಮಾಹಿತಿ ರಕ್ಷಣೆ ಮಸೂದೆ ಕರಡು ಸಿದ್ಧಪಡಿಸುತ್ತಿದ್ದು, ಮಾರ್ಚ್ ವೇಳೆ ಪೂರ್ಣಗೊಳ್ಳಲಿದೆ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ತಿಳಿಸಿದ್ದಾರೆ.
ಇಂದು ಸಹ ತಮ್ಮ ವಾದವನ್ನು ಮುಂದುವರೆಸಿದ ಅರ್ಜಿದಾರರ ಪರ ವಕೀಲ ಶ್ಯಾಮ್ ದಿವಾನ್ ಅವರು, ಆಧಾರ್ ಕಾಯ್ದೆ ಪ್ರಕಾರ, ಭಾರತೀಯ ನಾಗರಿಕರ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ದತ್ತಾಂಶವನ್ನು ಖಾಸಗಿ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬಹುದಾಗಿದೆ ಎಂದರು.
ಕಳೆದ ಬುಧವಾರ ಆಧಾರ್ ಕಾರ್ಡ್ ನಾಗರಿಕರ ಪೌರ ಹಕ್ಕುಗಳ ಸಾವಿಗೆ ಕಾರಣವಾಗಬಹುದು ಎಂದು ದಿವಾನ್ ವಾದಿಸಿದ್ದರು. ಆಧಾರ್ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಮೂಲಕ ಪೌರ ಹಕ್ಕುಗಳ ಅವಸಾನವಾಗುತ್ತದೆ. ಜನರ ಸಂವಿಧಾನವನ್ನು ಇದು ಸರ್ಕಾರದ ಸಂವಿಧಾನವನ್ನಾಗಿ ಮಾರ್ಪಡಿಸುತ್ತದೆ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics