ದೇಶ

ಸರ್ಕಾರದ ಅಧಿಕೃತ ಸಂವಹನದಲ್ಲಿ ದಲಿತ ಪದ ಬಳಕೆ ಮಾಡುವಂತಿಲ್ಲ, ಮಧ್ಯಪ್ರದೇಶ ಹೈಕೋರ್ಟ್ ಆದೇಶ

Raghavendra Adiga
ಭೋಪಾಲ್:  ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಮ್ಮ ಅಧಿಕೃತ ಸಂವಹನದಲ್ಲಿ'ದಲಿತ' ಪದ ಬಳಕೆ ಮಾಡಬಾರದು ಎಂದು ಮಧ್ಯಪ್ರದೇಶ ಹೈಕೋರ್ಟ್ ಆದೇಶಿಸಿದೆ  
ಮಧ್ಯಪ್ರದೇಶ ಹೈಕೋರ್ಟ್ ನ ಗ್ವಾಲಿಯರ್ ನ್ಯಾಯಪೀಠ ಈ ರೀತಿ ಆದೇಶ ನೀಡಿದ್ದು ಭಾರತ ಸಂವಿಧಾನದಲ್ಲಿ 'ದಲಿತ' ಪದವಿಲ್ಲ. ಹೀಗಾಗಿ ಆ ಪದ ಬಳಕೆ ಮಾಡಬಾರದು. ದಲಿತ ಪದ ಬಳಸುವ ಸ್ಥಳದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ ಎಂಬ ಪದ ಬಳಕೆ ಮಾಡಬಹುದು ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಸಾಮಾಜಿಕ ಕಾರ್ಯಕರ್ತ ಮೋಹನ್ ಲಾಲ್ ಎನ್ನುವವರು ಕಳೆದ ಡಿಸೆಂಬರ್ ನಲ್ಲಿ ದಲಿತ ಪದ ಬಳಕೆಯನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.]
ಮೇಲ್ವರ್ಗದ ಜನರು ದಲಿತ ಎನ್ನುವ ಪದವನ್ನು ಅವಹೇಳನಾಕಾರಿಯಾಗಿ ಬಳಕೆ ಮಾಡುತ್ತಿದ್ದಾರೆ. ಅವರು ದಲಿತ ಪದವನ್ನು ಬಳಸಿಕೊಂಡು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರನ್ನು ಅವಮಾನಿಸುತ್ತಿದ್ದಾರೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
SCROLL FOR NEXT