ಮುಂಬೈ: ರಾಜ್ ಠಾಕ್ರೆ ನೇತೃತ್ವದ ಮಹರಾಷ್ಟ್ರ ನವ ನಿರ್ಮಾಣ ಸೇನೆ(ಎಂಎನ್ಎಸ್) ಜನವರಿ 25ರಂದು ತೆರೆ ಕಾಣುತ್ತಿರುವ ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ವಿವಾದಾತ್ಮಕ ಚಿತ್ರ 'ಪದ್ಮಾವತ್' ಬೆಂಬಲಕ್ಕೆ ನಿಂತಿದ್ದು, ಚಿತ್ರ ಪ್ರದರ್ಶನಕ್ಕೆ ವಿರೋಧಿಸದಂತೆ ರಜಪೂತ್ ಸಂಘಟನೆಗಳಿಗೆ ಎಚ್ಚರಿಕೆ ನೀಡಿದೆ.
ಪ್ರತಿಭಟನಾಕಾರರು ಸುಪ್ರೀಂ ಕೋರ್ಟ್ ನಿರ್ಧಾರವನ್ನು ಗೌರವಿಸಬೇಕು ಮತ್ತು ಮುಂಬೈ ಪ್ರದೇಶದಲ್ಲಿ ಚಿತ್ರ ಬಿಡುಗಡೆ ನಿಷೇಧಿಸುವುದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಎಂಎನ್ಎಸ್ ಫಿಲ್ಮ್ ವಿಂಗ್ ಕಾರ್ಯಾಧ್ಯಕ್ಷೆ ಶಾಲಿನಿ ಠಾಕ್ರೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬೈ ಪ್ರದೇಶದಲ್ಲಿ ಚಿತ್ರ ಬಿಡುಗಡೆಯನ್ನು ಯಾರಾದರೂ ತಡೆಯಲು ಯತ್ನಿಸಿದರೆ ಅವರಿಗೆ ಎಂಎನ್ಎಸ್ ಕಾರ್ಯಕರ್ತರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಾವು ಪದ್ಮಾವತ್ ಚಿತ್ರಕ್ಕೆ ಯಾವತ್ತೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಪಾಕಿಸ್ತಾನಿ ನಟರಿಗೆ ಚಿತ್ರದಲ್ಲಿ ಅವಕಾಶ ನೀಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಎಂಎನ್ಎಸ್ ನಾಯಕಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics