ದೇಶ

ರಾಜೀವ್ ಗಾಂಧಿ ಹತ್ಯೆ ಪ್ರಕರಣ: ಅಪರಾಧಿಗಳ ಬಿಡುಗಡೆ ಸಂಬಂಧ ಕೇಂದ್ರದ ನಿಲುವು ಕೇಳಿದ ಸುಪ್ರೀಂ ಕೋರ್ಟ್

Raghavendra Adiga
ನವದೆಹಲಿ: ರಾಜೀವ್ ಗಾಂಧಿ ಹತ್ಯೆ ಪ್ರಕರಣ ಸಂಬಂಧ ಏಳು ಅಪರಾಧಿಗಳ ಜೈಲು ಶಿಕ್ಷೆಯನ್ನು ರದ್ದುಗೊಳಿಸುವ ತಮಿಳು ನಾಡು ಸರ್ಕಾರದ ಪ್ರಸ್ತಾಪದ ಬಗೆಗೆ ಕೇಂದ್ರ ತನ್ನ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ. 
ಕೇಂದ್ರವು "ತಾನೇನು ಬಯಸುತ್ತಿದ್ದೇನೆ" ಎಂದು ಇನ್ನು ಮೂರು ತಿಂಗಳೊಳಗೆ ತಿಳಿಸಬೇಕೆಂದು ಕೋರ್ಟ್ ಆದೇಶಿಸಿದೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಪೆರರಿವಾಲನ್, ಮುರುಗನ್, ಸಂತನ್, ನಳಿನಿ, ರಾಬರ್ಟ್ ಪಿಯೂಶ್, ಜಯಕುಮಾರ್ ಮತ್ತು ರವಿಚಂದ್ರನ್ ಅವರುಗಳು ಕಳೆದ 24 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ತಮಿಳುನಾಡು ಸರ್ಕಾರ ಇವರನ್ನು ಬಿಡುಗಡೆ ಗೊಳಿಸುವ ಉದ್ದೇಶದಿಂಡ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. 
SCROLL FOR NEXT