ದೇಶ

ತ್ರಿವಳಿ ತಲಾಖ್ ಮಸೂದೆ ಮುಸ್ಲಿಂ ಪುರುಷರನ್ನು ಶಿಕ್ಷಿಸಲು ಒಂದು ತಂತ್ರ: ಓವೈಸಿ

Vishwanath S
ತ್ರಿವಳಿ ತಲಾಖ್ ಮಸೂದೆ ಜಾರಿಗೆ ತರುವ ಮೂಲಕ ಮುಸ್ಲಿಂ ಸಮುದಾಯ ಪುರುಷರನ್ನು ಶಿಕ್ಷಿಸುವ ಒಂದು ತಂತ್ರವಾಗಿದೆ ಎಐಎಂಐಎಂ ಅಧ್ಯಕ್ಷ ಅಸಾವುದ್ದೀನ್ ಒವೈಸಿ ಆರೋಪಿಸಿದ್ದಾರೆ. 
ಪದ್ಮಾವತ್ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಮಿತಿಯು ರಚನೆಯಾಯಿತು ಆದರೆ ತ್ರಿವಳಿ ತಲಾಖ್ ವಿಷಯದ ಬಗ್ಗೆ ಇಂತಹ ಹೆಜ್ಜೆ ಇಡಲಿಲ್ಲ ಎಂದು ಹೈದರಾಬಾದ್ ನ ಲೋಕಸಭಾ ಸಂಸದ ಕೇಂದ್ರ ಸರ್ಕಾರದ ವಿರುದ್ಧ ಒವೈಸಿ ವಾಗ್ದಾಳಿ ನಡೆಸಿದರು. 
ತ್ರಿವಳಿ ತಲಾಖ್ ಮಸೂದೆ ಮುಸ್ಲಿಂ ಸಮುದಾಯದ ವಿರುದ್ಧದ ಪಿತ್ತೂರಿಯಾಗಿದೆ. ಆ ಮೂಲಕ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳನ್ನು ರಸ್ತೆಗೆ ಕರೆತರುವುದು ಮತ್ತು ಪುರುಷರನ್ನು ಜೈಲಿಗೆ ಕಳುಹಿಸಲು ಇದು ಒಂದು ತಂತ್ರವಾಗಿದೆ ಎಂದು ಸಾರ್ವಜನಿಕ ರ್ಯಾಲಿಯೊಂದರಲ್ಲಿ ಒವೈಸಿ ಆರೋಪಿಸಿದ್ದಾರೆ. 
ಇದೇ ವೇಳೆ ವಿಚ್ಛೇದನ ನೀಡಲು ತ್ರಿವಳಿ ತಲಾಖ್ ಮಾರ್ಗವನ್ನು ತೆಗೆದುಕೊಳ್ಳುವವರನ್ನು ಸಾಮಾಜಿಕವಾಗಿ ಬಹಿಷ್ಕರಿ ಎಂದು ಮುಸ್ಲಿಂ ಸಮುದಾಯವನ್ನು ಕೇಳಿದರು. 
ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ಏನನ್ನು ಮಾಡುತ್ತಿಲ್ಲ. ಆದರೆ ಇತರರು ಮಾಡಿದ ಉತ್ತಮ ಕೆಲಸಗಳಿಂದ ಅವರು ಕ್ರೆಡಿಟ್ ಪಡೆದುಕೊಳ್ಳಲು ಮುಂದಾಗಿರುತ್ತಾರೆ ಎಂದು ಆರೋಪಿಸಿದರು. 
SCROLL FOR NEXT