ದೇಶ

ಕೇಂದ್ರ ಬಜೆಟ್: ಹಿರಿಯ ನಾಗರಿಕರು, ವಿಧವೆಯರ ಮಾಸಿಕ ಪಿಂಚಣಿ 1 ಸಾವಿರ ರೂ. ಗೆ ಏರಿಕೆ?

Nagaraja AB

ನವದೆಹಲಿ: ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ  ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ವಿಧವೆಯರು, ಹಿರಿಯ ನಾಗರಿಕರ ಮಾಸಿಕ ಪಿಂಚಣಿಯನ್ನು 1 ಸಾವಿರ ರೂ. ಹೆಚ್ಚಿಸುವ ಸಾಧ್ಯತೆ ಇದೆ.

ಕಳೆದ 12 ವರ್ಷಗಳಿಂದಲೂ ಪಿಂಚಣಿ ಯೋಜನೆಯನ್ನು ಪರಿಷ್ಕರಿಸಿಲ್ಲ. ಜೀವನಮಟ್ಟಕ್ಕನುಗುಣವಾಗಿ ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿ ಯೋಜನೆಯಡಿ ವಿಧವೆಯರಿಗೆ ಮಾಸಿಕ 1 ಸಾವಿರ ರೂ. ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸ್ತುತ ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿ ಯೋಜನೆಯಡಿ ಕೇಂದ್ರಸರ್ಕಾರ ಹಿರಿಯ ನಾಗರಿಕರಿಗೆ ಮಾಸಿಕ 200 ಹಾಗೂ ವಿಧವೆಯರಿಗೆ ಮಾಸಿಕ 300 ರೂ ಪಿಂಚಣಿ ನೀಡುತ್ತಿದೆ.
 ಇದರಿಂದ ಜೀವನ ನಿರ್ವಹಣೆ ಅಸಾಧ್ಯ. ಹಾಗಾಗೀ ಮಾಸಿಕ 500 ಅಥವಾ 1 ಸಾವಿರ ರೂ. ಹೆಚ್ಚಿಸಬೇಕೆಂದು ಬಜೆಟ್ ಪೂರ್ವ ಸಮಾಲೋಚನೆ ವೇಳೆ  ಹೆಸರಾಂತ ಆರ್ಥಿಕ ತಜ್ಞ ಜೀನ್ ಡ್ರೀಜ್ ಅರುಣ್ ಜೇಟ್ಲಿ ಅವರನ್ನು ಒತ್ತಾಯಿಸಿದ್ದರು.

ರಾಷ್ಟ್ರೀಯ ವೃದ್ದಾಪ್ಯ ಪಿಂಚಣಿ ಯೋಜನೆ ಸಮಾಜದಲ್ಲಿನ  ಕೆಲ ಬಡವರಿಗೆ ನೆರವು ನೀಡುವ ಉತ್ತಮ ಯೋಜನೆಯಾಗಿದ್ದು, ಕೂಡಲೇ 500 ರೂ. ಹೆಚ್ಚಿಸುವಂತೆ ಆರ್ಥಿಕ ತಜ್ಞರ ಗುಂಪೊಂದು ಇತ್ತೀಚಿಗೆ ಅರುಣ್ ಜೇಟ್ಲಿಗೆ ಪತ್ರ ಕೂಡಾ ಬರೆದಿತ್ತು.






SCROLL FOR NEXT