ಸಂಗ್ರಹ ಚಿತ್ರ 
ದೇಶ

ಮುಂಬೈ ರ್ಯಾಲಿ ವೇಳೆ ಎಂಐಎಂ ಮುಖ್ಯಸ್ಥ ಒವೈಸಿ ಮೇಲೆ ಶೂ ಎಸೆತ!

ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರ ಮೇಲೆ ಶೂ ಎಸೆದ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ: ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರ ಮೇಲೆ ಶೂ ಎಸೆದ ಘಟನೆ ಮುಂಬೈನಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಮುಂಬೈನ ನಾಗಪಾಡದಲ್ಲಿ ರ್ಯಾಲಿಯಲ್ಲಿ ಭಾಷಣ ಮಾಡುತ್ತಿದ್ದ ಒವೈಸಿ ಮೇಲೆ ಯಾರೋ ಅಪರಿಚಿತ ವ್ಯಕ್ತಿ ತಾವು ತೊಟ್ಟಿದ್ದ ಬೂಟು ಎಸೆದಿದ್ದಾರೆ. ಘಟನೆಯಲ್ಲಿ ಒವೈಸಿಗೆ ಯಾವುದೇ ರೀತಿಯ  ಗಾಯಗಳಾಗಿಲ್ಲವಾದರೂ, ಕೆಲ ಒವೈಸಿ ಗೊಂದಲಕ್ಕೀಡಾಗಿದ್ದರು. 
ಘಟನೆ ನಡೆದ ಬೆನ್ನಲ್ಲೇ ಬೂಟು ಎಸೆದ ವ್ಯಕ್ತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಒವೈಸಿ, 'ಬೂಟು ಎಸೆಯುವವರು ಗಾಂಧಿ, ಧಾಬೋಲ್ಕರ್, ಗೋವಿಂದ್ ಪನ್ಸಾರೆ ಹಂತಕರ ಹಿಂಬಾಲಕರು' ಎಂದು ಹೇಳಿದರು. ಅಲ್ಲದೆ "ನನ್ನ  ಪ್ರಜಾಸತ್ತಾತ್ಮಕ ಹಕ್ಕುಗಳಿಗಾಗಿ ನಾನು ನನ್ನ ಜೀವವನ್ನೇ ಅರ್ಪಿಸಲು ನಾನು ಸಿದ್ಧನಿದ್ದೇನೆ. ಇಂತಹ ಕೃತ್ಯ ಎಸಗುವವರೆಲ್ಲ ಹತಾಶ ವ್ಯಕ್ತಿಗಳಾಗಿದ್ದು, ಇವರಿಗೆ ಸರ್ಕಾರ ತ್ರಿವಳಿ ತಲಾಕ್‌ ಬಗ್ಗೆ ಕೈಗೊಂಡ ನಿರ್ಧಾರ ಜನರಿಗೆ  ಅದರಲ್ಲೂ ವಿಶೇಷವಾಗಿ ಮುಸ್ಲಿಮರಿಗೆ ಸ್ವೀಕೃತವಾಗಿಲ್ಲ ಎಂಬುದು ತಿಳಿಯುತ್ತಿಲ್ಲ. ಇಂತಹ ಘಟನೆಗಳು ನಮ್ಮನ್ನು ನಿಜ ನುಡಿಯುವುದರಿಂದ ತಡೆಯಲಾರವು ಎಂದು ಓವೈಸಿ ಹೇಳಿದ್ದಾರೆ.
ಘಟನೆ ಬಳಿಕ ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು  ಸಿಸಿಟಿವಿ ಚಿತ್ರಿಕೆಗಳನ್ನು ಪರಿಶೀಲಿಸುತ್ತಿದ್ದು ಬೂಟು ಎಸೆದ ವ್ಯಕ್ತಿ ಯಾರೆಂಬುದರ ಕುರಿತು ಪರಿಶೀಲನೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!