ದೇಶ

ದೇಶ ಉದ್ದೇಶಿಸಿ ರಾಷ್ಟ್ರಪತಿ ಭಾಷಣ: 'ನಮ್ಮ ಜನ ಪ್ರಜಾಪ್ರಭುತ್ವ ನಿರ್ಮಾಪಕರು ಮಾತ್ರವಲ್ಲ, ಅದರ ಆಧಾರ ಸ್ಥಂಭ'

Lingaraj Badiger
ನವದೆಹಲಿ: ನಮ್ಮ ದೇಶದ ಜನ ಪ್ರಜಾಪ್ರಭುತ್ವದ ನಿರ್ಮಾಪಕರು ಮಾತ್ರವಲ್ಲ. ಅದರ ಆಧಾರ ಸ್ಥಂಭವಾಗಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ್ ಕೊವಿಂದ್ ಅವರು ಗುರುವಾರ ಹೇಳಿದ್ದಾರೆ.
ನಾಳೆ 69ನೇ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಇಂದು ದೇಶವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿಗಳು, ದೇಶದ ಜನ ಪ್ರಜಾಪ್ರಭುತ್ವದ ಭುನಾದಿ ಇದ್ದಂತೆ. ಇಡೀ ದೇಶದ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು.
ದೇಶಕ್ಕಾಗಿ ಪ್ರಾಣ ತ್ಯಾಗಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನೆಯುವ ದಿನ ಇದು. ಅವರಿಗೆ ನನ್ನ ನಮನ. ದೇಶದ ಎಲ್ಲಾ ಸೈನಿಕರಿಗೆ, ವೈದ್ಯರಿಗೆ, ರೈತರಿಗೆ, ವಿಜ್ಞಾನಿಗಳಿಗೆ, ಇಂಜಿನಿಯರ್ ಗಳಿಗೆ ಮತ್ತು ಈ ದೇಶದ ತಾಯಂದಿರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದಿದ್ದಾರೆ.
ಭಾರತದ ಶೇ.60ರಷ್ಟು ನಾಗರಿಕರು 35 ವರ್ಷದೊಳಗಿನವರಾಗಿದ್ದು, ಅವರೇ ಈ ದೇಶದ ಭವಿಷ್ಯ. ಅವರು ಸರ್ಕಾರ ಉತ್ತರ ಶಿಕ್ಷಣಕ್ಕಾಗಿ ನೀಡಿರುವ ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳಬೇಕು ಎಂದು ರಾಷ್ಟ್ರಪತಿಗಳು ಕರೆ ನೀಡಿದ್ದಾರೆ.
ಪ್ರತಿಯೊಬ್ಬ ನಾಗರಿಕನಿಗೂ ದೇಶದಲ್ಲಿ ಸಮಾನ ಹಕ್ಕು ನೀಡಲಾಗಿದೆ. ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕಾಗಿದೆ. ಅಗತ್ಯವಿರುವವರಿಗೆ ಸಹಾಯ ಮಾಡಿ ಎಂದು ದೇಶದ ಶ್ರೀಮಂತರಿಗೆ ರಾಮನಾಥ್ ಕೊವಿಂದ್ ಅವರು ಮನವಿ ಮಾಡಿದ್ದಾರೆ.
SCROLL FOR NEXT