ದೇಶ

ಮೈನಸ್ 30 ಡಿಗ್ರಿ ತಾಪಮಾನದಲ್ಲೂ 18 ಸಾವಿರ ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಭಾರತೀಯ ಯೋಧರು!

Srinivasamurthy VN
ಶಿಮ್ಲಾ: ದೇಶಾದ್ಯಂತ 69ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆ ಮುಗಿಲು ಮಟ್ಟಿರುವಂತೆಯೇ ಇತ್ತ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಸಿಬ್ಬಂದಿ ಮೈನಸ್ 30 ಡಿಗ್ರಿ ತಾಪಮಾನದಲ್ಲೂ 18 ಸಾವಿರ ಅಡಿ ಎತ್ತರದ ಗಡಿ  ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ.
ಈ ಬಗ್ಗೆ ಸ್ವತಃ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ ಪಡೆ ತನ್ನ ಟ್ವಿಟರ್ ಖಾತೆಯಲ್ಲಿ ವಿಡಿಯೋ ಮತ್ತು ಫೋಟೋ ಅಪ್ಲೋಡ್ ಮಾಡಿದ್ದು, ಐಟಿಬಿಪಿಯ ಒಂದು ತುಕಡಿ ಇಂಡೋ-ಟಿಬೆಟ್ ಗಡಿಯ ಗುಡ್ಡ ಪ್ರದೇಶಕ್ಕೆ ತೆರಳಿ ಅಲ್ಲಿ  ತ್ರಿವರ್ಣ ಧ್ವಜ ಹಾರಿಸಿದೆ. ಸಂಪೂರ್ಣ ಹಿಮದಿಂದ ಕೂಡ ಪ್ರದೇಶದಲ್ಲಿ ಹರಸಾಹಸ ಪಟ್ಟು ತ್ರಿವರ್ಣ ಧ್ವಜದೊಂದಿಗೆ ತೆರಳಿದ ಸೈನಿಕರು, ಹರಸಾಹಸ ಪಟ್ಟು ತ್ರಿವರ್ಣ ಧ್ವಜ ಹಾರಿಸಿದ್ದಾರೆ.
ಯೋಧರು ತ್ರಿವರ್ಣ ಧ್ವಜದೊಂದಿಗೆ ತೆರಳುತ್ತಿರುವ ಮತ್ತು ಗುಡ್ಡ ಪ್ರದೇಶದಲ್ಲಿ ತ್ರಿವರ್ಣ ಧ್ವಜ ಹಾರಿಸಿರುವ ವಿಡಿಯೋ ಇದೀಗ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಚೀನಾಕ್ಕೆ  ಹೊಂದಿಕೊಂಡಿರುವ ಭಾರತೀಯ ಗಡಿ ರಕ್ಷಣೆ ಮಾಡುತ್ತಿರುವ ಐಟಿಬಿಪಿ ಪಡೆಗೆ ಟ್ವಿಟರ್ ಬಳಕೆದಾರರು ಶುಭಕೋರಿರುವುದು ಸೈನಿಕರ ದೇಶಭಕ್ತಿಯನ್ನು ಉತ್ತೇಜಿಸುತ್ತಿದೆ.
SCROLL FOR NEXT