69ನೇ ಗಣರಾಜ್ಯೋತ್ಸವ ದಿನಾಚರಣೆ: ರಾಜಪಥ್'ನಲ್ಲಿ ಕಣ್ಮನ ಸೆಳೆದ ಕರ್ನಾಟಕದ ವನ್ಯಜೀವಿಗಳ ಸ್ತಬ್ದ ಚಿತ್ರ 
ದೇಶ

69ನೇ ಗಣರಾಜ್ಯೋತ್ಸವ ಪರೇಡ್: ರಾಜಪಥ್'ನಲ್ಲಿ ಕಣ್ಮನ ಸೆಳೆದ ಕರ್ನಾಟಕದ ವನ್ಯಜೀವಿ ಸ್ತಬ್ದ ಚಿತ್ರ

ದೇಶದಾದ್ಯಂತ 69ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾಜಧಾನಿ ದೆಹಲಿಯ ರಾಜಪಥ್ ನಲ್ಲಿ ನಡೆಯುತ್ತಿರುವ ಆಕರ್ಷಕ ಪರಡೇನಲ್ಲಿ ಕರ್ನಾಟಕ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಿದ್ದು, ಗಣ್ಯಾತಿಗಣ್ಯರ ಗಮನವನ್ನು ಸೆಳೆದಿದೆ...

ನವದೆಹಲಿ: ದೇಶದಾದ್ಯಂತ 69ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ರಾಜಧಾನಿ ದೆಹಲಿಯ ರಾಜಪಥ್ ನಲ್ಲಿ ನಡೆಯುತ್ತಿರುವ ಆಕರ್ಷಕ ಪರಡೇನಲ್ಲಿ ಕರ್ನಾಟಕ ಸ್ತಬ್ಧ ಚಿತ್ರವನ್ನು ಪ್ರದರ್ಶಿಸಿದ್ದು, ಗಣ್ಯಾತಿಗಣ್ಯರ ಗಮನವನ್ನು ಸೆಳೆದಿದೆ. 
ರಾಜಪಥ್ ನಲ್ಲಿ ನಡೆದ ಪರೇಡ್ ನಲ್ಲಿ ಕರ್ನಾಟಕ ಪರಿಸರ ಮತ್ತು ವನ್ಯಜೀವಿಗಳ ಸ್ತಬ್ದ ಚಿತ್ರವನ್ನು ಪ್ರದರ್ಶಿಸಿದ್ದು, ನೆರೆದಿದ್ದವರ ಕಣ್ಮನವನ್ನು ಸೆಳೆಯಿತು. ವನ್ಯಜೀವಿ, ಪಕ್ಷಿ ಸಂಕುಲಗಳ ಸ್ತಬ್ದ ಚಿತ್ರದಲ್ಲಿ ಹುಲಿ, ಆನೆ, ಕಾಡುಕೋಣ, ಚಿರತೆ, ನವಿಲು, ಹಾರ್ನ್ಬಿಲ್, ನೀರು ನಾಯಿಗಳ ಪ್ರತಿಮೆಗಳಿದ್ದು, ಮುಭಾಗದಲ್ಲಿದ್ದ ಪಶ್ಚಿಮ ಘಟ್ಟದಲ್ಲಿ ಮಾತ್ರ ಕಂಡು ಬರುವ ಜಗತ್ತಿನ ಅತ್ಯಂತ ಹಳೆಯ ವಾನರ ಜಾತಿಯ ಪ್ರಾಣಿ ಸಿಂಹ ಬಾಲದ 3 ಸಿಂಗಳಿಕಗಳು ನೆರೆದಿದ್ದವರು ಗಮನ ಸೆಳೆಯಿತು. 
ಸ್ತಬ್ದ ಚಿತ್ರದಲ್ಲಿ ಪ್ರದರ್ಶನದಲ್ಲಿ ರಾಜ್ಯ 2005ರಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿತ್ತು. ಇದಾದ ಬಳಿಕ ಮತ್ತಾವುದೇ ವರ್ಷದಲ್ಲಿಯೂ ಪ್ರಥಮ ಸ್ಥಾನವನ್ನು ಗೆದ್ದಿಲ್ಲ. ಆದರೆ, ಎರಡು ಬಾರಿ 2ನೇ ಸ್ಥಾನ ಮತ್ತು 3ನೇ ಸ್ಥಾನವನ್ನು ಗೆದ್ದಿದೆ. 2015ನೇ ಸಾಲಿನಲ್ಲಿ ರಾಜ್ಯದ ಚನ್ನಪಟ್ಟಣ ಗೊಂಬೆಗಳ ಸ್ತಬ್ದಚಿತ್ರಕ್ಕೆ 3ನೇ ಸ್ಥಾನ ಲಭ್ಯವಾಗಿತ್ತು. 
ಸ್ತಬ್ದ ಚಿತ್ರ ನೋಡುತ್ತಿದ್ದಂತೆಯೇ ಎಂದು ನಿಂತ ಸಂತಸ ವ್ಯಕ್ತಪಡಿಸಿದ ಕೇಂದ್ರ ಸಚಿವ
ವಿವಿಧ ರಾಜ್ಯಗಳ ಸ್ತಬ್ದ ಚಿತ್ರಗಳನ್ನು ಕುಳಿತುಕೊಂಡು ನೋಡುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಅವರು, ರಾಜ್ಯದ ಸ್ತಬ್ದಚಿತ್ರ ಕಾಣುತ್ತಿದ್ದಂತೆಯೇ ಸಂತಸಗೊಂಡು ಎದ್ದುನಿಂತ ಮೆಚ್ಚುಗೆ ವ್ಯಕ್ತಪಡಿಸಿದರು. 
ಸ್ತಬ್ದ ಚಿತ್ರ ಸಾಗಿ ಹೋಗುವ ವೇಳೆ ಅನಂತ್ ಕುಮಾರ್ ಹಾಗೂ ಅವರ ಪತ್ನಿ ಎದ್ದು ನಿಂತು ಮೆಚ್ಚುಗೆ ವ್ಯಕ್ತಪಡಿಸಿ ಸಂಭ್ರಮಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT