ಧ್ವಜಾರೋಹಣ ನೆರವೇರಿಸಿದ ಮೋಹನ್ ಭಾಗ್ವತ್
ತಿರುವನಂತಪುರಂ: ಗಣರಾಜ್ಯೋತ್ಸವ ದಿನದಂದ ತ್ರಿವರ್ಣ ಧ್ವಜಾರೋಹಣ ಸಂಬಂಧ ಕೇರಳ ಸರ್ಕಾರ ಹೊರಡಿಸಿದ್ದ ಸುತ್ತೋಲೆಯ ಹೊರತಾಗಿಯೂ, ಸಿಎಂ ಪಿಣರಾಯಿ ವಿಜಯನ್ ಗೆ ಸೆಡ್ಡು ಹೊಡೆದಿರುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ.
ಕೇರಳದ ಪಾಲಕ್ಕಾಡ್ ನ ಖಾಸಗಿ ಶಾಲೆಯಲ್ಲಿ ಮೋಹನ್ ಭಾಗ್ವತ್ ಅವರು ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ. ಈ ಹಿಂದೆ ಸ್ವತಂತ್ರ ದಿನಾಚರಣೆ ವೇಳೆ ಕೇರಳದಲ್ಲಿ ಮೋಹನ್ ಭಾಗ್ವಕ್ ಧ್ವಜಾರೋಹಣ ಮಾಡಿದ್ದಾಗ ಕೆಂಗಣ್ಣು ಬೀರಿದ್ದ ಕೇರಳ ಸರ್ಕಾರ ಗಣೃರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡುವ ಗಣ್ಯರ ಕುರಿತು ಕೇರಳದ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆ ಮೂಲಕ ಮೋಹನ್ ಭಾಗ್ವತ್ ರನ್ನು ಧ್ವಜಾರೋಹಣದಿಂದ ದೂರವಿಡಲು ಕೇರಳ ಸರ್ಕಾರ ಮುಂದಾಗಿತ್ತು.
ಆದರೆ ಕೇರಳ ಸರ್ಕಾರದ ಸುತ್ತೋಲೆಯನ್ನೂ ಮೀರಿ ಭಾಗ್ವತ್ ಕೇವಲ ಆರು ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಧ್ವಜಾರೋಹಣ ಮಾಡಿದ್ದಾರೆ.