ಗುವಾಹತಿ: 69ನೇ ಗಣರಾಜ್ಯೋತ್ಸವ ಸಂಭ್ರಮದ ನಡುವೆಯೇ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿ ಮೂರು ಕಡಿಮೆ ತೀವ್ರತೆಯೆ ಬಾಂಬ್ ಗಳು ಸ್ಫೋಟಗೊಂಡಿವೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಈ ಮೂರು ಬಾಂಬ್ ಸ್ಫೋಟಗಳಲ್ಲಿ ಪ್ರಾಣ ಹಾನಿಯಾಗಿರುವ ಬಗ್ಗೆ ಇದುವರೆಗೂ ವರದಿಯಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಜಗೂನ್ ಪೊಲೀಸ್ ಠಾಣೆಯ ಸಮೀಪ ಐದು ನಿಮಿಷಗಳ ಅಂತರದಲ್ಲಿ ಎರಡು ಬಾಂಬ್ ಸ್ಫೋಟಗೊಂಡಿವೆ. ಲೆಡೊ ಪೊಲೀಸ್ ಠಾಣೆಯ ಬಳಿಕ ಮತ್ತೊಂದು ಬಾಂಬ್ ಸ್ಫೋಟಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಉಲ್ಫಾ ಉಗ್ರರು ಇಂದು ಕಡಿಮೆ ತೀವ್ರತೆಯ ಮೂರು ಬಾಂಬ್ ಗಳನ್ನು ಸ್ಫೋಟಿಸಿದ್ದಾರೆ ಎಂದು ಅಸ್ಸಾಂ ಪೊಲೀಸ್ ಮಹಾ ನಿರ್ದೇಶಕ ಮುಖೇಶ್ ಸಹಯ್ ಅವರು ಗುವಾಹತಿಯಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.