ತಂದೆಯಿಂದ ಮಗನಿಗೆ ಕೊಡಲಿ ಏಟು, ಪ್ರಿಯಕರನೆಂದು ಬಗೆದು ಮಗನ ಹತ್ಯೆಗೆ ಯತ್ನ
ಕರ್ನೂಲ್: ತನ್ನ ಪತ್ನಿಯ ಪ್ರಿಯಕರ ಎಂದು ಭಾವಿಸಿ ತಂದೆಯೊಬ್ಬ ತನ್ನ ಮಗನ ಮೇಲೆ ಕೊಡಲಿಯಿಂದ ಹಲ್ಲೆ ಮಾಡಿರುವ ಘಟನೆ ಆಂಧ್ರ ಪ್ರದೇಶ ಕರ್ನೂಲು ಜಿಲ್ಲೆಯ ಗುಟುಪುಲ್ಲೆ ಗ್ರಾಮದಲ್ಲಿ ನಡೆದಿದೆ.
ತನ್ನ ತಂದೆಯಿಂದ ಹಲ್ಲೆಗೊಳಗಾದವನನ್ನು ಪರಶುರಾಮ (14) ಎಂದು ಗುರುತಿಸಲಾಗಿದೆ. ಕಳೆದ ಕೆಲವು ತಿಂಗಳುಗಳಿಂದ ತಂದೆ-ಮಗನ ನಡುವೆ ಮನಸ್ತಾಪಗಳಿತ್ತು, ಆದರೆ ಶುಕ್ರವಾರ, ಆರೋಪಿಯಾದ ತಂದೆ ಸೋಮಣ್ಣ ತನ್ನ ಮಗನನ್ನು ಕೊಡಲಿನಿಂದ ಹೊಡೆದು ಹಲ್ಲೆ ಮಾಡಿದ್ದಾನೆ. ಈ ವೇಳೆ ಬಾಲಕನ ಕೈ ಹಾಗೂ ಭುಜಕ್ಕೆ ಬಲವಾದ ಏತಾಗಿದ್ದು ಗಾಯಗಳಾಗಿದೆ ಎಂದು ಸ್ಥಳೀಯ ಪೋಲೀಸರು ಹೇಳಿದ್ದಾರೆ.
ಆರೋಪಿ ಸೋಮಣ್ಣನ ಪತ್ನಿ ವಿವಾಹೇತರ ಸಂಬಂಧ ಇರಿಸಿಕೊಂಡಿದ್ದಳೆಂದು ಆರೋಪಿಸಲಾಗಿದ್ದು ಮಂಚದದ ಮೇಲೆ ಮಲಗಿದ್ದ ತನ್ನ ಮಗನನ್ನೇ ಸೋಮಣ್ಣ ಕೊಡಲಿಯಿಂದ ಹೊಡೆದು ಕೊಲ್ಲಲು ಯತ್ನಿಸಿದ್ದನು. ಆದರೆ ತಾನು ಹೊಡೆದು ಕೊಲ್ಲಲು ನೋಡಿದ್ದು ತನ್ನ ಮಗನನ್ನೆಂದು ಅರಿವಾದ ನಂತರ ಸೋಮಣ್ಣ ನೆಲಕ್ಕೆ ಕುಸಿದನು. ಇದೀಗ ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 307ರ ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಪೋಲೀಸರು ತನಿಖೆ ಕೈಗೊಂಡಿದ್ದಾರೆ.