ದೇಶ

ಪದ್ಮಾವತ್ ಹಿಂಸಾಚಾರ: ಕರ್ಣಿ ಸೇನಾ ಮುಖ್ಯಸ್ಥನ ಬಂಧನ, ತನಿಖೆಗೆ ಎಸ್ಐಟಿ ರಚನೆ

Lingaraj Badiger
ಗುರುಗ್ರಾಮ: 'ಪದ್ಮವಾತ್' ವಿರೋಧಿಸಿ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಶ್ರೀ ಕರ್ಣಿ ಸೇನಾ ಮುಖ್ಯಸ್ಥ ಥಾಕೂರ್ ಕುಶಾಲ್ ಪಾಲ್ ಅವರನ್ನು ಶನಿವಾರ ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ ' 'ಪದ್ಮವಾತ್' ಚಿತ್ರ ಬಿಡುಗಡೆ ವಿರೋಧಿಸಿ ಗುರುಗ್ರಾಮದಲ್ಲಿ ನಡೆದ ಹಿಂಸಾಚಾರ ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡ(ಎಸ್ ಐಟಿ) ರಚಿಸಲಾಗಿದೆ ಎಂದು ಹರಿಯಾಣ ಪೊಲೀಸರು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 38 ಮಂದಿಯನ್ನು ಬಂಧಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹರಿಯಾಣ ಪೊಲೀಸರು ತಿಳಿಸಿದ್ದಾರೆ.
ಕಳೆದ ಬುಧವಾರ ಗುರುಗ್ರಾಮದಲ್ಲಿ ಪದ್ಮಾವತ್ ಚಿತ್ರ ವಿರೋಧಿಸಿ 20ರಿಂದ 25 ಮಕ್ಕಳಿದ್ದ ಶಾಲಾ ಬಸ್ ಮೇಲೆ ದಾಳಿ ನಡೆಸಿ, ಬೆಂಕಿ ಹಚ್ಚಿದ್ದರು. ಅಲ್ಲದೆ ನೂರಾರು ಕರ್ಣಿ ಸೇನಾ ಕಾರ್ಯಕರ್ತರು ಸಾರ್ವಜನಿಕ ಆಸ್ತಿ ಹಾನಿ ಮಾಡಿದ್ದರು.
SCROLL FOR NEXT