ದೇಶ

ಅಂತರ್ಜಾಲಗಳಲ್ಲಿ ಪರಸ್ಪರ ಪೋಟೋ ಹಾಕದಂತೆ ನಿರ್ಬಂಧಿಸಿ ವಿಚ್ಚೇದನಕ್ಕೆ ಸುಪ್ರೀಂಕೋರ್ಟ್ ಸಮ್ಮತಿ

Nagaraja AB

ನವದೆಹಲಿ:  ದಂಪತಿಯೊಬ್ಬರ ವಿವಾಹ ಸಮಸ್ಯೆಯನ್ನು  ಪರಿಹರಿಸಿರುವ ಸುಪ್ರೀಂಕೋರ್ಟ್, ಅಂತರ್ಜಾಲ, ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಯೂ
ಪರಸ್ಪರರ ನಡುವಿನ   ಪೋಟೋ ಹಾಕದಂತೆ ನಿರ್ಬಂಧಿಸಿ ವಿಚ್ಚೇದನಕ್ಕೆ ಸಮ್ಮತಿ ನೀಡಿದೆ.

ವಿಚ್ಚೇದಿತ ಮಹಿಳೆಗೆ ಎರಡು ತಿಂಗಳೊಳಗೆ   37 ಲಕ್ಷ ರೂಪಾಯಿ ಶಾಶ್ವತ ಜೀವನಾಂಶ ನೀಡುವಂತೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ , ಮಹಾರಾಷ್ಟ್ರದ ಎಂಜಿನಿಯರಿಂಗ್ ಮತ್ತು ನಿರ್ವಹಣಾ ಪದವಿಧರನೊಬ್ಬರನಿಗೆ ಆದೇಶಿಸಿದೆ.

ವಿಚ್ಚೇದಿತ ಪುರುಷನಾಗಲೀ ಅಥವಾ ಮಹಿಳೆಯಾಗಲೀ ತಮ್ಮ ನಡುವಿನ ಪೋಟೋಗಳನ್ನು ಅನ್ ಲೈನ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿಯೂ ಹಾಕದಂತೆ ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ ಕರ್ ಮತ್ತು ಡಿ. ವೈ. ಚಂದ್ರಚೂಡ್ ಅವರಿದ್ಧ ಪೀಠ ತೀರ್ಪು ನೀಡಿದೆ.

 ಮಹಿಳೆಗೆ ಸೂಕ್ತ ಜೀವನಾಂಶ ನೀಡುವಂತೆ ಕೋರ್ಟ್ ಆದೇಶಿಸಿದೆ ಎಂದು ಮಹಿಳೆ ಪರ ವಕೀಲೆ  ದುಷ್ಯಂತ್ ಪಾರಾಷರ್ ತಿಳಿಸಿದ್ದಾರೆ.

SCROLL FOR NEXT