ಯೋಗಿ ಆದಿತ್ಯನಾಥ್ 
ದೇಶ

ಎಸ್ ಪಿ, ಬಿಎಸ್ ಪಿ ಸರ್ಕಾರಕ್ಕಿಂತಲೂ ಯೋಗಿ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚು: ಉತ್ತರ ಪ್ರದೇಶ ಸಚಿವ

ಉತ್ತರ ಪ್ರದೇಶದ ಸಚಿವರೇ ಮುಖ್ಯಮಂತ್ರಿಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಈ ಹಿಂದಿನ ಎಸ್ ಪಿ, ಬಿಎಸ್ ಪಿ ಆಡಳಿತಕ್ಕಿಂತ

ಲಖನೌ: ಉತ್ತರ ಪ್ರದೇಶದ ಸಚಿವರೇ ಮುಖ್ಯಮಂತ್ರಿಗಳ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡುವ ರೀತಿಯಲ್ಲಿ ಹೇಳಿಕೆ ನೀಡಿದ್ದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಈ ಹಿಂದಿನ ಎಸ್ ಪಿ, ಬಿಎಸ್ ಪಿ ಆಡಳಿತಕ್ಕಿಂತ ಹೆಚ್ಚು ಭ್ರಷ್ಟಾಚಾರವಿದೆ ಎಂದು ಹೇಳಿದ್ದಾರೆ. 
ಉತ್ತರ ಪ್ರದೇಶದ ಸಚಿವ ಓಂ ಪ್ರಕಾಶ್ ರಾಜ್ ಭರ್ ಈ ಹೇಳಿಕೆ ನೀದಿದ್ದು, ಯೋಗಿ ಆದಿತ್ಯನಾಥ್ ಅವರ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಮಿತ್ರ ಪಕ್ಷ ಸುಹೆಲ್ದೇವ್ ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥರಾಗಿರುವ ರಾಜ್ ಭರ್, ಈಗಿನ ಸರ್ಕಾರ ತಮ್ಮ ಪಕ್ಷಕ್ಕೆ ಮಾನ್ಯತೆ ನೀಡುತ್ತಿಲ್ಲ, ಈ ಹಿಂದಿನ ಬಿಎಸ್ ಪಿ, ಎಸ್ ಪಿ ಆಡಳಿತಕ್ಕಿಂತ ಹೆಚ್ಚು ಭ್ರಷ್ಟಾಚಾರ ಈಗಿನ ಸರ್ಕಾರದಲ್ಲಿ ನಡೆಯುತ್ತಿದೆ, ನಾನು ಈ ಸರ್ಕಾರದ ಭಾಗವಾಗಿದ್ದೇನೆ, ಆದರೆ ಈ ಸರ್ಕಾರ ನನ್ನದಲ್ಲ ಎಂದು ಹೇಳಿದ್ದಾರೆ. 
ಇನ್ನು 2019 ರ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಸ್ಪರ್ಧಿಸುವ ವಿಷಯ ಬಿಜೆಪಿ ಹೇಗೆ ನಡೆದುಕೊಳ್ಳುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ರಾಜ್ ಭರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ