ರೂ. 70 ಸಾವಿರ ಮೌಲ್ಯದ ಜಾಕೆಟ್ ತೊಟ್ಟ ರಾಹುಲ್
ಶಿಲ್ಲಾಂಗ್: ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರವನ್ನು ಸದಾ ಸೂಟ್ ಬೂಟ್ ಸರ್ಕಾರ ಎಂದು ಗೇಲಿ ಮಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಕುರಿತು ಬಿಜೆಪಿ ಮಂಗಳವಾರ ವ್ಯಂಗ್ಯವಾಡಿದೆ.
ಮೇಘಾಲಯದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿಯವರು ದುಬಾರಿ ಬೆಲೆಯ ಜಾಕೆಟ್ ತೊಟ್ಟಿದ್ದರು. ಬ್ರಿಟಿಷ್ ಐಷಾರಾಮಿ ಫ್ಯಾಶನ್ ಬ್ರ್ಯಾಂಡ್ ಬರ್ಬೆರಿಯ ಈ ಜಾಕೆಟ್ ಬೆಲೆ ರೂ.70,000 ಆಗಿದ್ದು. ಈ ಜಾಕೆಟ್ ನ್ನು ರಾಹುಲ್ ಅವರು ಹಾಕಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಬಿಜೆಪಿ ಇದೀಗ ರಾಹುಲ್ ಗಾಂಧಿಯವರನ್ನು ಗೇಲಿ ಮಾಡುತ್ತಿದೆ.
ಮೇಘಾಲಯದ ಸೂಟ್ ಬೂಟ್ ಸರ್ಕಾರ, ಕಪ್ಪು ಹಣದ ಮೂಲಕ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡುತ್ತಿದೆ. ನೀವು ಹೀಗೆ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬದಲು, ಮೇಘಾಲಯದಲ್ಲಿರುವ ನಿಮ್ಮ ಅದಕ್ಷ ಸರ್ಕಾರ ಏನು ಮಾಡುತ್ತಿದೆ ಎಂಬ ಒಂದು ವರದಿಯನ್ನು ಸಿದ್ಧಪಡಿಸಿಕೊಡಿ ಎಂದು ಮೇಘಾಲಯದ ಬಿಜೆಪಿ ಟ್ವೀಟ್ ಮಾಡಿ ರಾಹುಲ್ ಅವರನ್ನು ಗೇಲಿ ಮಾಡಿದೆ.
2015ರಲ್ಲಿ ಅಮೆರಿಕಾದ ಅಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರನ್ನು ಮಾಡುವ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದುಬಾರಿ ಬೆಲೆಯ ಸೂಟನ್ನು ತೊಟ್ಟಿದ್ದರು. ಇದನ್ನು ಗೇಲಿ ಮಾಡಿದ್ದ ರಾಹುಲ್ ಗಾಂಧಿಯವರು, ಪ್ರಧಾನಿ ಮೋದಿಯವರದ್ದು ಸೂಟ್ ಬೂಟ್ ಸರ್ಕಾರ ಎಂದಿದ್ದರು.
ಮೇಘಾಲಯದಲ್ಲಿ ಫೆ.27 ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ರಾಹುಲ್ ಅವರು ಪ್ರಚಾರ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. 60 ವಿಧಾನಸಭಾ ಕ್ಷೇತ್ರಗಳ ಹಣೆಬರಹ ಮಾ.3ರಂದು ಹೊರಬೀಳಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos