ದೇಶ

ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಜಿಎಸ್'ಟಿ ಉತ್ತಮ ಉದಾಹರಣೆಯಾಗಿದೆ: ಪ್ರಧಾನಿ ಮೋದಿ

Manjula VN
ನವದೆಹಲಿ: ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಸರಕು ಮತ್ತು ಸೇನಾ ತೆರಿಗೆ (ಜಿಎಸ್'ಟಿ) ವ್ಯವಸ್ಥೆ ಉತ್ತಮ ಉದಾಹರಣೆಯಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಭಾನುವಾರ ಹೇಳಿದ್ದಾರೆ. 
ಸ್ವತಂತ್ರ ಭಾರತದ ಅತೀದೊಡ್ಡ ತೆರಿಗೆ ಸುಧಾರಣೆಯಾದ ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ವ್ಯವಸ್ಥೆ ಜಾರಿಗೆ ಬಂದು ಒಂದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಜಿಎಸ್'ಟಿ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ. 
ಜಿಎಸ್'ಟಿ ವ್ಯವಸ್ಥೆ ಜಾರಿಗೆ ಬಂದು ಇಂದಿಗೆ 1 ವರ್ಷಗಳಾಗಿದ್ದು, ಈ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯಗಳನ್ನು ಹೇಳುತ್ತಿದ್ದೇನೆ. ಸಹಕಾರಿ ಸಂಯುಕ್ತ ವ್ಯವಸ್ಥೆಗೆ ಹಾಗೂ ಭಾರತದ ಸ್ಥೈರ್ಯಕ್ಕೆ ಜಿಎಸ್'ಟಿ ಉತ್ತಮ ಉದಾಹರಣೆಯಾಗಿದೆ. ಭಾರತೀಯ ಆರ್ಥಿಕತೆಯಲ್ಲಿ ಜಿಎಸ್'ಟಿ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ ಎಂದು ತಿಳಿಸಿದ್ದಾರೆ. 
ಸರ್ಕಾರ ಜಾರಿಗೆ ತಂದ ಜಿಎಸ್'ಟಿ ಭಾರತದ ಆರ್ಥಿಕತೆಯ ಬೆಳವಣಿಗೆ, ಸರಳತೆ ಹಾಗೂ ಪಾರದರ್ಶಕತೆಯನ್ನು ತಂದಿದೆ. ಔಪಚಾರೀಕರಣವನ್ನು ಉತ್ತೇಜನ, ಉತ್ಪಾದನೆಯಲ್ಲಿ ಹೆಚ್ಚಳ ಹಾಗೂ ವ್ಯಾಪಾರ ಮಾಡುವುದಕ್ಕೂ ಸುಲಭ ಮಾರ್ಗವನ್ನು ತಂದುಕೊಟ್ಟಿದೆ. ಅಲ್ಲದೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೂ ಜಿಎಸ್'ಟಿಯಿಂದ ಅನುಕೂಲವಾಗಿದೆ ಎಂದಿದ್ದಾರೆ. 
SCROLL FOR NEXT