ರಾಷ್ಟ್ರಪತಿ ರಾಮನಾಥ್ ಕೋವಿಂದ್
ನವದೆಹಲಿ: ಮುಂದಿನ ದಶಕದಲ್ಲಿ 2025 ರ ಹೊತ್ತಿಗೆ ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ- ಜಿಡಿಪಿ ಗಾತ್ರ ದ್ವಿಗುಣಗೊಳ್ಳಲಿದ್ದು, 5 ಟ್ರಿಲಿಯನ್ ಅಮೆರಿಕನ್ ಡಾಲರ್ ನಷ್ಟಾಗುವ ಸಾಧ್ಯತೆ ಇದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ.
ಭಾರತೀಯ ಚಾರ್ಟೆಡ್ ಅಕೌಂಟೆಂಟ್ಸ್ ಸಂಸ್ಥೆಯ 75ನೇ ವರ್ಷಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿದ್ದು, ಆರ್ಥಿಕ ಬೆಳವಣಿಗೆ ಹಾಗೂ ವ್ಯವಹಾರ ವಹಿವಾಟು ಹೆಚ್ಚಿಸಲು ಲೆಕ್ಕ ಪರಿಶೋಧಕರು ಹೆಚ್ಚಿನ ಕೆಲಸ ಮಾಡಬೇಕಾಗಿದೆ. ಅದು ನಿಮ್ಮ ಪ್ರಮುಖ ಜವಾಬ್ದಾರಿಯೂ ಆಗಿದೆ ಎಂದರು.
ಈ ಮಧ್ಯೆ ಜಿಎಸ್ ಟಿ ಅನುಷ್ಠಾನಕ್ಕೆ ಒಂದು ವರ್ಷ ಸಂದ ಬಗ್ಗೆ ಮಾತನಾಡಿದ ರಾಮನಾಥ್ ಕೋವಿಂದ್, ಜಿಎಸ್ ಟಿ ಮತ್ತಿತರ ಪ್ರಯತ್ನಗಳಿಂದ ಕೇಂದ್ರಸರ್ಕಾರ ಭಾರತೀಯ ಸಮಾಜ ಹೆಚ್ಚಿನ ರೀತಿಯ ತೆರಿಗೆಯಿಂದ ತಪ್ಪಿಸಿಕೊಂಡಂತಾಗಿದೆ ಎಂದು ಹೇಳಿದರು.
ಪ್ರಧಾನಮಂತ್ರಿ ಜನ್ ಧನ್ ಯೋಜನೆ ಅನುಷ್ಛಾನದಿಂದ ಬಡ ವರ್ಗದ ಜನರಿಗೆ ಬ್ಯಾಂಕಿಂಗ್ ಸೇವೆ ಕೈಗೆಟುಕುವಂತಾಗಿದೆ. ಸುಗಣ ಹಣವಾಸು ವ್ಯವಸ್ಥೆ ಹಿನ್ನೆಲೆಯಲ್ಲಿ ನೋಟು ಅಮಾನ್ಯೀಕರಣ, ಬೇನಾಮಿ ವ್ಯವಹಾರ ತಡೆ ತಿದ್ದುಪಡಿ ಕಾಯ್ದೆ ಜಾರಿ ಮತ್ತಿತರ ಕ್ರಮಗಳನ್ನು ಸರ್ಕಾರ ಕೈಗೊಂಡಿರುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics